Current Date 26 Aug, 2026

Martin Box Office Day 7: 7ನೇ ದಿನ ಬಾಕ್ಸಾಫೀಸ್‌ನಲ್ಲಿ 'ಮಾರ್ಟಿನ್' ಖಬರ್ ಏನು? ₹20 ಕೋಟಿಯ ಗಡಿ ದಾಟಿತೇ?

ಬಹಳ ದಿನಗಳ ಬಳಿಕ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿರುವ ಖುಷಿಯಲ್ಲಿ ಸ್ಯಾಂಡಲ್‌ವುಡ್‌ ಇದೆ. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಅಕ್ಟೋಬರ್ 11ರಂದು ದಸರಾ ಹಬ್ಬಕ್ಕೆ ಬಿಡುಗಡೆಯಾಗಿತ್ತು. ಆಕ್ಷನ್ ಪ್ರಿನ್ಸ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ 'ಮಾರ್ಟಿನ್' ದೇಶಾದ್ಯಂತ ಪ್ರತಿಕ್ರಿಯೆ ಹೇಗಿರಬಹುದೆಂದು ಕುತೂಹಲದಿಂದ ನೋಡಲಾಗಿತ್ತು. ಸಿನಿಮಾ ಮಂದಿ ನಿರೀಕ್ಷೆ ಮಾಡಿದಂತೆ 'ಮಾರ್ಟಿನ್‌'ಗೆ ಕನ್ನಡದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಹಿಂದಿ ಹಾಗೂ ತೆಲುಗಿನಲ್ಲಿ ಸಾಧಾರಣ ಪ್ರತಿಕ್ರಿಯೆ ಸಿಕ್ಕಿದ್ದು, ತಮಿಳು ಹಾಗೂ ಮಲಯಾಳಂನಲ್ಲಿ 'ಮಾರ್ಟಿನ್‌' ರೆಸ್ಪಾನ್ಸ್ ಚೆನ್ನಾಗಿಲ್ಲ. ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲಿ ಎರಡು ಭಾಷೆಗಳ ಕಲೆಕ್ಷನ್ ಉತ್ತಮವಾಗಿಲ್ಲ. ಆದರೆ, ಕನ್ನಡದ ಮಟ್ಟಿಗೆ ಒಳ್ಳೆಯ ಗಳಿಕೆ ಎನ್ನಬಹುದು.