ಮೊದಲಿನಿಂದಲೂ ಕನ್ನಡದ ಚಿತ್ರದ ಜೊತೆಗೆ ತೆಲುಗಿನ 'ಪುಷ್ಪ' ಚಿತ್ರವನ್ನು ಹೋಲಿಕೆ ಮಾಡುವ ಕೆಲಸ ನಡೀತಿದೆ. ಅದಕ್ಕೆ ಕಾರಣ ಇದೆ. ಸುಕುಮಾರ್ ಶಿಷ್ಯ ಬುಚ್ಚಿಬಾಬು ನೀಡಿದ ಅದೊಂದು ಹೇಳಿಕೆ ಇದಕ್ಕೆ ಕಾರಣ ಎಂದರೂ ತಪ್ಪಾಗಲ್ಲ. ಇದೀಗ 'KGF'-2 ಜೊತೆ 'ಪುಷ್ಪ'-2 ಚಿತ್ರವನ್ನು ಹೋಲಿಕೆ ಮಾಡಲಾಗ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ 'KGF' ಸರಣಿ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿತ್ತು. ಆಂಧ್ರ, ತೆಲಂಗಾಣದ ಕೆಲವು ಭಾಗಗಳಲ್ಲಿ 'KGF'-2 ದಾಖಲೆಯನ್ನು ತೆಲುಗು ಚಿತ್ರಗಳಿಂದಲೂ ಮೀರಿಸಲು ಸಾಧ್ಯವಾಗ್ತಿಲ್ಲ. ರಾಕಿ ಭಾಯ್ ಆಗಿ ಯಶ್ ಆರ್ಭಟಕ್ಕೆ ಭಾರತೀಯ ಚಿತ್ರರಂಗವೇ ಶಾಕ್ ಆಗಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು.