Current Date 25 Aug, 2026

Bhairathi Ranagal Twitter Review: 'ಭೈರತಿ ರಣಗಲ್' ಸಿನಿಮಾ ಶಿವಣ್ಣನ ಫ್ಯಾನ್ಸ್ ಏನಂದ್ರು?

ಸೆಂಚುರಿ ಸ್ಡಾರ್ ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಇಂದು (ನವೆಂಬರ್ 15) ಅದ್ಧೂರಿಯಾಗಿ ರಿಲೀಸ್ ಆಗಿದೆ. 'ಮಫ್ತಿ' ಬಳಿಕ ಮತ್ತೆ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್‌ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರು ಕೂಡ ತುದಿಗಾಲಲ್ಲಿ ನಿಂತಿದ್ದರು. ಇದು 'ಮಫ್ತಿ' ಸಿನಿಮಾದ ಪ್ರೀಕ್ವೆಲ್ ಆಗಿದ್ದರಿಂದ ಬಿಡುಗಡೆಗೂ ಮುನ್ನವೇ ಈ ಸಿನಿಮಾ ಸಾಕಷ್ಟು ಕುತೂಹಲವನ್ನು ಹುಟ್ಟಾಕಿತ್ತು.

'ಮಫ್ತಿ' ಸಿನಿಮಾದಲ್ಲಿ ಶಿವಣ್ಣ ಪಾತ್ರ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಆಗಿತ್ತು. ಸೆಂಚುರಿ ಸ್ಟಾರ್ ಮ್ಯಾನರಿಸಂ, ಕಣ್ಣಿನಲ್ಲೇ ಯುದ್ಧ ಸಾರುವ ಶಿವಣ್ಣನನ್ನು ನೋಡಿ ಪ್ರೇಕ್ಷಕರು ಕಳೆದು ಹೋಗಿದ್ದರು. ಭೈರತಿ ರಣಗಲ್ ಯಾರು? ಹಿಂದೆ 'ಭೈರತಿ ರಣಗಲ್' ಹೇಗಿದ್ದ? ಭೈರತಿ ರಣಗಲ್ ವೈಲೆಂಟ್ ಆಗಿದ್ದು ಯಾಕೆ? ಇಂತಹ ಹಲವು ಪ್ರಶ್ನೆಗಳಿಗೆ ಈ ಪ್ರೀಕ್ವೆಲ್‌ನಲ್ಲಿ ಉತ್ತರ ಕೊಡುವುದಕ್ಕೆ ಮುಂದಾಗಿದ್ದಾರೆ.