Current Date 13 May, 2026

BBK 11: ಹೈಡ್ರಾಮ ಮಾಡಿ ಬಿಗ್‌ಬಾಸ್ ಮನೆಯಿಂದ ಹೊರಬಂದ ಶೋಭಾ ಫಸ್ಟ್ ರಿಯಾಕ್ಷನ್

ಬಿಗ್‌ಬಾಸ್ ಮನೆಯಿಂದ ಈ ವಾರ ಮತ್ತೊಬ್ಬರು ಹೊರ ಬಂದಿದ್ದಾರೆ. ಅದು ಎಲಿಮಿನೇಟ್ ಆಗಿ ಅಲ್ಲ. ಬದಲಿಗೆ ಶೋ ಕ್ವಿಟ್ ಮಾಡಿ ಪಟ್ಟು ಹಿಡಿದು ದೊಡ್ಮನೆ ತೊರೆದಿದ್ದಾರೆ. ಕಳೆದ ವಾರ ನಾಮಿನೇಷನ್‌ನಲ್ಲಿ ಶೋಭಾ ಶೆಟ್ಟಿ ಹೆಸರು ಜನ ವೋಟ್ ಮಾಡಿ ಸೇವ್ ಮಾಡಿದ್ದರು. ಆದರೂ ಆಕೆ ಮನೆಯಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡಿದ್ದರು.

ಇದೀಗ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. "ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಟಾಪ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಹೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರೆಯಲು ಬಿಡುತ್ತಿಲ್ಲ. ಯಾರನ್ನು, ಯಾವುದನ್ನು ನಾನು ಹಗುರವಾಗಿ ತೆಗೆದುಕೊಂಡಿಲ್ಲ. ಜೀವನದ ಜವಾಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ" ಎಂದು ಶೋಭಾ ಬರೆದುಕೊಂಡಿದ್ದಾರೆ.