Current Date 25 Aug, 2026

BBK 11: ಶೋಭಾ ಮಾತಿಗೆ ಧನರಾಜ್‌ಗೆ ನಡುಕ, ಹನುಮಂತನಿಗೆ ಪುಕಪುಕ!

ಬಿಗ್ ಬಾಸ್ ಮನೆಗೆ ಬಂದ ಶೋಭಾ ಶೆಟ್ಟಿ ಒಂದೇ ದಿನದಲ್ಲಿ ಜಗಳ ಶುರು ಮಾಡಿಕೊಂಡಿದ್ದಾರೆ. ತೆಲುಗಿನಲ್ಲಿ ಮುಗಿಸಿರುವ ಜರ್ನಿ ಇಲ್ಲಿ ಕಂಟಿನ್ಯೂ ಆಗ್ತಿದೆ ಎಂದು ಭಾವಿಸಿದ್ದಾರೆ ಎನಿಸುತ್ತದೆ. ಅದಕ್ಕೆ ಶೋಭಾ ಶೆಟ್ಟಿ ಅಲ್ಲಿ ವಾಯ್ಸ್ ಜೋರು ಮಾಡಿದಂತೆ, ಗರಂ ಆದಂತೆಯೇ ಇಲ್ಲಿಯೂ ಆಗುತ್ತಿದ್ದಾರೆ.

ಕನ್ನಡದಲ್ಲಾದರೂ ಕಪ್ ಗೆಲ್ಲಬೇಕು ಎಂದೇ ಶೋಭಾ ಶೆಟ್ಟಿ ಬಂದಿದ್ದಾರೆ. ಆದರೆ ಅರ್ಧಕ್ಕೆ ಮನೆಯೊಳಗೆ ಬಂದ ಶೋಭಾ ಶೆಟ್ಟಿ ಪೂರ್ತಿಯಾಗಿ ಇರುತ್ತಾರಾ ಅಥವಾ ಅರ್ಧಕ್ಕೆ ಹೋಗುತ್ತಾರಾ ಎಂಬುದನ್ನು ನೋಡಬೇಕಿದೆ. ಆದರೆ ಮನೆಯೊಳಗೆ ಶೋಭಾ ಶೆಟ್ಟಿ ಧ್ವನಿ ಏರಿಸಿದ್ದು ನೋಡಿ ನಿಜಕ್ಕೂ ಗಾಬರಿಯಾಗಿರುವುದು ಹನುಮಂತು.