Current Date 15 May, 2026

Actor Yash: ರಾಮಾಯಣದಲ್ಲಿ ರಿಯಲ್‌ ಗೋಲ್ಡ್‌ ಬಳಕೆ

ಒಂದು ಕಡೆ ಟಾಕ್ಸಿಕ್‌ ಮತ್ತೊಂದು ಕಡೆ ರಾಮಾಯಣ… ನಟ ಯಶ್‌ ಸುತ್ತ ಈ ಎರಡು ಸಿನಿಮಾಗಳ ಸುದ್ದಿಗಳು ಜೋರಾಗಿ ಓಡಾಡುತ್ತಿವೆ.
ಸದ್ಯ ರಾಮಾಯಣ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದ ನಿರ್ಮಾಣದ ಜೊತೆಗೆ ಚಿತ್ರದಲ್ಲಿ ಯಶ್‌ ರಾವಣನಾಗಿಯೂ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ಯಶ್‌ ಅವರ ಪಾತ್ರಕ್ಕೆ ನಿಜವಾದ ಬಂಗಾರವನ್ನೇ ಬಳಸಲು ನಿರ್ಮಾಪಕರು ತೀರ್ಮಾನಿಸಿದ್ದಾರಂತೆ.
ಇದರ ಜೊತೆಗೆ ರಣಬೀರ್‌, ಸಾಯಿ ಪಲ್ಲವಿ ಪಾತ್ರಕ್ಕೂ ನೈಜ ಬಂಗಾರವನ್ನೇ ಬಳಸುವ ಮೂಲಕ ಸಿನಿಮಾದ “ಮೆರುಗು’ ಹೆಚ್ಚಿಸಲು ನಿರ್ಮಾಪಕರು ಮುಂದಾಗಿದ್ದಾರೆ ಎಂಬ ಸುದ್ದಿ ಬಿಟೌನ್‌ನಿಂದ ಕೇಳಿಬಂದಿದೆ. ಈ ಚಿತ್ರ 850 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ.