Current Date 25 Aug, 2026

ಅಭಿಮಾನಿಗಳು ಏನಂದ್ರು? 'ಮಾರ್ಟಿನ್' ಮುಂದಿನ ನಡೆ ಏನು?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಕುತೂಹಲ ಮೂಡಿಸಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಪ್ರಚಾರಕ್ಕೆ ಚಾಲನೆ ಕೊಡಲು ಸಿದ್ಧತೆ ನಡೀತಿದೆ.

ಮುಂಬೈನಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಎ. ಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮಾರ್ಟಿನ್' ಸಿನಿಮಾ ಮೂಡಿ ಬರಲಿದೆ. ಕಳೆದ ವರ್ಷ ಬಂದಿದ್ದ ಟೀಸರ್ ಹಿಟ್ ಆಗಿತ್ತು.