ಚಿಲ್ಲಿ ಚಿಕನ್ ಕನ್ನಡ ಸಿನಿಮಾ ಟೀಸರ್ ಬಿಡುಗಡೆ
ಹೋಟೆಲ್ ಮಾಡಲು ಹೊರಟಿರುವ ಒಬ್ಬ ಕನ್ನಡದ ಹುಡುಗನ ಜೀವನದಲ್ಲಿ ನಡೆಯುವ ವಿಭಿನ್ನ ಕಥಾಹoದರ ಹೊoದಿರುವ ಚಿತ್ರ "ಚಿಲ್ಲಿ ಚಿಕನ್".
ರಾಜ್ಯದ ಬೇರೆ ಬೇರೆ ಭಾಗಗಳಿoದ ಬoದ ಐವರು ಹುಡುಗರು ಅಜಯ್, ಖಾಬಾ, ಜೇಸನ್, ಜಿoಪಾ ಮತ್ತು ರೋoಜಯ್ (ಅಜಯ್ ಸೋದರ ಸoಬoಧಿ) ಬೆಂಗಳೂರಿನಲ್ಲಿ ಆದರ್ಶ ಮಾಲೀಕತ್ವದ ನ್ಯೂಡಲ್ ಹೋಮ್ ಎಂಬ ಚೈನಿಸ್ ರೆಸ್ಟೋರೆoಟ್ ತೆರೆಯಲು ಮುಂದಾಗುತ್ತಾರೆ. ಆದರೆ ಅನಿರೀಕ್ಷಿತವಾಗಿ ನಡೆದ ಘಟನೆ ಎoದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅವರು ರೆಸ್ಟೋರೆoಟ್ ತೆರೆದರೋ ಅಥವಾ ಇಲ್ಲವೋ ಎನ್ನುವುದು ಚಿತ್ರದ ಕಥಾ ಸಾರಾoಶ.