Current Date 15 Oct, 2026

ಕಮಿಷನ್ ಡೈರೆಕ್ಟರ್ ಎಂದಿದ್ದಕ್ಕೆ ಎ.ಪಿ.ಅರ್ಜುನ್ ಕೆಂಡಾಮಂಡಲ, ಹೇಳಿದ್ದೇನು ಮಾರ್ಟಿನ್ ಸೂತ್ರಧಾರ...?

ಮೊದಲ ಸಿನಿಮಾಗೇ ಅಷ್ಟು ಚೆಂದದ ಪ್ರಾಡಕ್ಟನ್ನು ಸೃಷ್ಟಿಸಿದ್ದ ನಿರ್ದೇಶಕ ಎ.ಪಿ. ಅರ್ಜುನ್ ನಂತರ ಅದ್ಧೂರಿ, ರಾಟೆ, ಐರಾವತ, ಕಿಸ್ ಸಿನಿಮಾಗಳನ್ನು ನಿರ್ದೇಶಿಸಿದರು. ಸದ್ಯ ಅರ್ಜುನ್ ನಿರ್ದೇಶನ ಆರನೇ ಸಿನಿಮಾ ''ಮಾರ್ಟಿನ್‌'' ತೆರೆಗೆ ಬರಲು ತಯಾರಾಗಿ ನಿಂತಿದೆ. ಇದೇ ಅಕ್ಟೋಬರ್ ಹನ್ನೊಂದನೇ ತಾರೀಖು ಜಗತ್ತಿನಾದ್ಯಂತ ''ಮಾರ್ಟಿನ್'' ರಿಲೀಸಾಗುತ್ತಿದೆ. ಆದರೆ ಇದೇ ಸಮಯದಲ್ಲಿ ವಿವಾದವೊಂದು ಎ.ಪಿ.ಅರ್ಜುನ್ ಅವರನ್ನು ಸುತ್ತುವರೆದಿದೆ. ಹತ್ತಾರು ಪ್ರಶ್ನೆಗಳನ್ನೂ ಹುಟ್ಟುಹಾಕುವುದರ ಜೊತೆ ಗಾಂಧಿನಗರಕ್ಕೆ ಗಾಂಧಿನಗರವೇ ಎ.ಪಿ.ಅರ್ಜುನ್ ಅವರನ್ನು ಅನುಮಾನದ ದೃಷ್ಟಿಯಿಂದ ನೋಡುವಂತೆಯೂ ಈ ವಿವಾದ ಮಾಡಿದೆ.