Current Date 26 Aug, 2026

ಕರ್ನಾಟಕದಲ್ಲಿ 'KGF-2' ರೆಕಾರ್ಡ್ ಮುರಿತ್ತೀವಿ; 'ಪುಷ್ಪ-2' ವಿತರಕನ ಹೇಳಿಕೆಗೆ ಕನ್ನಡಿಗರು ಗರಂ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 5ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. 3 ವರ್ಷಗಳ ಹಿಂದೆ 'ಪುಷ್ಪ' ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಸದ್ಯ ಸೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆಯಿದೆ. ಆದರೆ ಸದ್ಯಕ್ಕೆ ಸಿನಿಮಾ ಬಗ್ಗೆ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಆಗಿಲ್ಲ. 'ಪುಷ್ಪ-2' ಚಿತ್ರದ 2 ಹಾಡುಗಳು ಸಿನಿರಸಿಕರ ಮನಗೆದ್ದಿದೆ. ಆದರೆ ಟೀಸರ್‌ಗಳು ಸದ್ದು ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಟ್ರೈಲರ್ ರಿಲೀಸ್ ಮಾಡಿ ಪ್ರೇಕ್ಷಕರ ಗಮನ ಸೆಳೆಯುವ ಲೆಕ್ಕಾಚಾರ ನಡೀತಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಪ್ರೀ ರಿಲೀಸ್ ಬ್ಯುಸಿನೆಸ್ 1000 ಕೋಟಿ ರೂ. ದಾಟಿದೆ ಎಂದು ಹೇಳಲಾಗ್ತಿದೆ. ಭಾರೀ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕು ಬಿಕರಿಯಾಗಿದೆ.