Current Date 15 Oct, 2026

ಕೆವಿಎನ್ ಸಂಸ್ಥೆಗೆ ಹೈಕೋರ್ಟ್ ನೋಟಿಸ್; 'ಟಾಕ್ಸಿಕ್' ಚಿತ್ರೀಕರಣಕ್ಕೆ ಆರಂಭದಲ್ಲೇ ವಿಘ್ನ?


ಗೀತು ಮೋಹನ್ ದಾಸ್ ನಿರ್ದೇಶನ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'KGF-2' ಬಳಿಕ ಯಶ್ ನಟನೆಯ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಕುತೂಹಲ ಮೂಡಿದೆ. ಈಗಾಗಲೇ ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಆರಂಭಿಸಲಾಗಿದೆ.

ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ 'ಟಾಕ್ಸಿಕ್' ಚಿತ್ರದ ಚಿತ್ರೀಕರಣಕ್ಕೆ ಸೆಟ್ ಹಾಕಲಾಗಿದೆ. ಭಾರೀ ವೆಚ್ಚದಲ್ಲಿ ಬಹಳ ಅದ್ಧೂರಿ ಸೆಟ್ ನಿರ್ಮಾಣವಾಗಿದೆ. ಬೆಂಗಳೂರಿನ ಹೊರ ವಲಯದ ಪೀಣ್ಯ ಪ್ಲಾಂಟೇಷನ್ 20.07 ಎಕರೆ ಜಾಗದಲ್ಲಿ ಸೆಟ್ ಎದ್ದು ನಿಂತಿದೆ. ಆದರೆ ಅರಣ್ಯ ಭೂಮಿಯಲ್ಲಿ ಸೆಟ್ ನಿರ್ಮಿಸಿದ್ದಾರೆ ಎಂದು ಆರೋಪಿಸಿ ವಕೀಲ ಜಿ. ಬಾಲಾಜಿ ನಾಯ್ಡು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.