Current Date 15 Oct, 2026

ನಮ್ಮ ಹೀರೋಯಿನ್ ಪವಿತ್ರಾ ಗೌಡಗೆ ದರ್ಶನ್ ಸರ್ ಆಗ್ಲೇ ''ಕಾಲ್'' ಮಾಡ್ತಿದ್ದರು.

ಇವತ್ತು ಪವಿತ್ರಾ ಗೌಡ ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿ. ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ ಮಾಡುವ ಪವಿತ್ರಾ ಬಳಿ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳಿವೆ. ಕೈಗೊಬ್ಬರು - ಕಾಲಿಗೊಬ್ಬರು ಸಹಾಯಕರು.

ಆದರೆ.. ನಿಮಗೆ ಗೊತ್ತಾ, ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸಂಸಾರವನ್ನ ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿರುವ ಪವಿತ್ರಾ ಗೌಡ ಬೆಸಿಕಲಿ ಮಿಡಲ್ ಕ್ಲಾಸ್ ಹುಡುಗಿ. ಆದರೆ ಮಧ್ಯಮ ವರ್ಗದ ಜನರಲ್ಲಿ ಕಾಣಸಿಗುವ ಯಾವ ಲಕ್ಷಣ ಕೂಡ ಈಕೆಯಲ್ಲಿ ಇರಲಿಲ್ಲ.