Current Date 15 May, 2026

ಈ ವಾರ 6 ಇಂಟ್ರೆಸ್ಟಿಂಗ್ ಕನ್ನಡ ಸಿನಿಮಾಗಳು ರಿಲೀಸ್; ನಿಮ್ಮ ಆಯ್ಕೆ ಯಾವುದು?

ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಆದರೆ ವಾರದ ಆರಂಭದಲ್ಲೇ ಕನ್ನಡ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಸಿಗುತ್ತಿದೆ. ಕನ್ನಡದ ಎರಡು ದೊಡ್ಡ ಚಿತ್ರಗಳು ಓಟಿಟಿಗೆ ಬಂದಿವೆ. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ನೆಟ್‌ಫ್ಲಿಕ್ಸ್‌ಗೆ 'ಬಘೀರ' ಬಂದಿದ್ದಾನೆ.

ಭಾರೀ ಕುತೂಹಲ ಮೂಡಿಸಿದ್ದ 'ಮಾರ್ಟಿನ್' ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಲಿಲ್ಲ. ಓಟಿಟಿಯಲ್ಲಿ ಕೂಡ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ 'ಬಘೀರ' ಸಿನಿಮಾ ಇದೀಗ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸದ್ದು ಮಾಡ್ತಿದ್ದಾನೆ. ಅದೆಲ್ಲದರ ನಡುವೆ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗೆ ಬರ್ತಿವೆ.