Current Date 26 Aug, 2026

ದರ್ಶನ್ ನಟನೆಯ 'ಮೆಜೆಸ್ಟಿಕ್' ಚಿತ್ರಕ್ಕೆ ಸಹಾಯ ಮಾಡಿದ್ದರು ಅಪ್ಪು

ಅಭಿಮಾನಿಗಳ ನಡುವೆ ಏನೇ ಕೆಸರೆರಚಾಟ, ಸೋಶಿಯಲ್ ಮೀಡಿಯಾ ವಾರ್ ಇದ್ದರೂ ನಟರ ಮಧ್ಯೆ ಉತ್ತಮ ಬಾಂಧವ್ಯ ಇರುತ್ತದೆ. ನಟ ದರ್ಶನ್ ಫ್ಯಾನ್ಸ್ ಹಾಗೂ ಪುನೀತ್ ರಾಜ್‌ಕುಮಾರ್‌ ಫ್ಯಾನ್ಸ್ ಕೆಲವೊಮ್ಮೆ ವಿಕೋಪಕ್ಕೆ ಹೋಗಿದ್ದು ಇದೆ. ಆದರೆ ದರ್ಶನ್ ಹಾಗೂ ಅಪ್ಪು ನಡುವೆ ಆತ್ಮೀಯ ಒಡನಾಟ ಇತ್ತು. ಡಾ. ರಾಜ್‌ಕುಮಾರ್ ಹಾಗೂ ತೂಗುದೀಪ ಶ್ರೀನಿವಾಸ್ ಕುಟುಂಬಗಳ ನಡುವೆ ದಶಕಗಳಿಂದ ಉತ್ತಮ ಬಾಂಧವ್ಯ ಇದೆ. ಅಣ್ಣಾವ್ರ ಸಾಕಷ್ಟು ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ್ ನಟಿಸಿದ್ದರು. ದೊಡ್ಮನೆ ಬ್ಯಾನರ್‌ ಸಿನಿಮಾಗಳಲ್ಲಿ ಅವರಿಗೊಂದು ಪಾತ್ರ ಇರುತ್ತಿತ್ತು. ನಟ ದರ್ಶನ್ ಸಹ ಆರಂಭದಲ್ಲಿ ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದರು.