Current Date 15 Oct, 2026

ಜೈಲಲ್ಲಿ ದಾಸ ;ದರ್ಶನ್ ಜೈಲುವಾಸ ಮುಕ್ತಾಯವಾಗುತ್ತಾ..? ಮನೆಯೂಟ ಸಿಗುತ್ತಾ..?

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅರೆಸ್ಟ್ ಆಗಿ ಒಂದು ತಿಂಗಳಿನ ಮೇಲೆ ಒಂದು ವಾರ ಕಳೆದಿದೆ. ದರ್ಶನ್ ಅವರ ನಿಜವಾದ ಅಭಿಮಾನಿಗಳು ತಮ್ಮ ಆರಾಧ್ಯ ನಟ ಮತ್ತು ಅವರ ಗ್ಯಾಂಗ್ ಮಾಡಿದ ಕೃತ್ಯವನ್ನು ಕಂಡು ಮರುಕ ಪಟ್ಟಿದ್ದಾರೆ. ʻಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದ್ದ ಒಬ್ಬ ನಟ ಹೀಗೆ ದೃಷ್ಕೃತ್ಯದ ಪಾಲುದಾರನಾಗಿ ಜೈಲು ಸೇರಿದರಲ್ಲಾʼ ಅಂಥಾ ಕೊರಗಿದ್ದಾರೆ. ದರ್ಶನ್ ಆದಷ್ಟು ಬೇಗ ಜೈಲಿನಿಂದ ಆಚೆ ಬರಲಿ ಎಂಬ ಪ್ರಾರ್ಥನೆಯನ್ನೂ ಮಾಡುತ್ತಿದ್ದಾರೆ. ಆ ಪ್ರಾರ್ಥನೆಯ ಫಲಾಫಲ ಇಂದು ಗೊತ್ತಾಗಲಿದೆ.

ಹೌದು. ಇಂದು ದರ್ಶನ್ ಹಾಗೂ ಅವರ ಸಹಚರರ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಪೂರ್ಣಗೊಳ್ಳಲಿದೆ. ಆದರೆ ಈ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗೋ ಸಾಧ್ಯತೆ ಇದೆ. ಯಾಕೆಂದರೆ, ದರ್ಶನ್ಹಾಗೂ ಇತರ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ದೊಡ್ಡ ಪಟ್ಟಿಯನ್ನ ಪೊಲೀಸರು ಸಿದ್ಧ ಪಡಿಸಿದ್ದಾರೆ. ಇವತ್ತು ನ್ಯಾಯಾಲಯಕ್ಕೆ ರಿಮಾಂಡ್ ಅರ್ಜಿಯನ್ನು ಸಲ್ಲಿಸಲಿದ್ದಾರೆ.