Current Date 18 Oct, 2026

ಕಾಕಾ ಹೊಡೆಯಲ್ಲ..ಚಮಚ ಹಿಡಿಯಲ್ಲ.. ಕೊಬ್ರಿ ಮಂಜು ಮಾಡ್ತಿರುವುದೇನು..?

ಕನ್ನಡದ ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದವರು ಕೆ. ಮಂಜು . ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಿನಿಮಾ ಸೇರಿದಂತೆ ಸುದೀಪ್‌, ಯಶ್ ತನಕ ಕನ್ನಡದ ಬಹುತೇಕ ಸ್ಟಾರ್ ಹೀರೋಗಳ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಶ್ರೀಯುತರದ್ದು. ಇಂಥಾ ಕೆ.ಮಂಜು ಇಲ್ಲಿವರೆಗೆ ಎಲ್ಲಿದ್ದರೋ ಗೊತ್ತಿಲ್ಲ. ಆದರೆ ಸದ್ಯಕ್ಕೆ ದಿಗ್ಗನೆ ಎದ್ದು ಬಂದು ದರ್ಶನ್ ಪರ ಬೆಂಬಲದ ಧ್ವಜ ಹಾರಿಸಲು ಶುರು ಮಾಡಿದ್ದಾರೆ. ಇದಕ್ಕೆ ಕಾರಣ ಏನೇ ಇರಬಹುದು. ಆದರೆ, ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಿರ್ಮಾಪಕ ಎಂದು ಕರೆಸಿಕೊಂಡ ಕೊಬ್ರಿ ಮಂಜು ಒಬ್ಬ ಆರೋಪಿಯ ಪರ ನಿಂತಿರುವುದು ನಿಜಕ್ಕೂ ದುರದೃಷ್ಟಕರ ಬೆಳವಣಿಗೆ ಅನ್ನುವ ಮಾತು ಬೇರೇ ಎಲ್ಲೂ ಅಲ್ಲ ನಿರ್ಮಾಪಕರ ಸಂಘದ ನೂತನ ಬಿಲ್ಡಿಂಗ್‌ನಲ್ಲಿಯೇ ಕೇಳಿ ಬರುತ್ತಿದೆ.