Current Date 15 May, 2026

ತೆರೆಗೆ ಬಂತು ವಸಿಷ್ಠ ನಟನೆಯ ‘ಲವ್ ಲೀ’

ನಟ ವಸಿಷ್ಠ ಸಿಂಹ ಈಗ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ. ಆ ನಿರೀಕ್ಷೆಯೇ “ಲವ್‌ ಲೀ’. ಇದು ವಸಿಷ್ಠ ಸಿಂಹ ನಟನೆಯ ಸಿನಿಮಾ. ಇಂದು ತೆರೆಕಾಣುತ್ತಿದೆ. ಈಗಾಗಲೇ ಟ್ರೇಲರ್‌, ಹಾಡುಗಳ ಮೂಲಕ ಸದ್ದು ಮಾಡಿರುವ ಈ ಚಿತ್ರವಿದು.


ತಮ್ಮ ಚಿತ್ರದ ಬಗ್ಗೆ ಮಾತನಾಡುವ ವಸಿಷ್ಠ, ಹೊಸಥರದ ಸಿನಿಮಾ ಮಾಡಬೇಕು ಎಂಬ ಕನಸನ್ನು ಇಟ್ಟುಕೊಂಡು ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾವಿದು. ರೌಡಿಸಂ, ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌ ಎಲ್ಲವೂ ಈ ಸಿನಿಮಾದ ಕಥೆಯಲ್ಲಿದೆ. ತುಂಬ ಚೆನ್ನಾಗಿ ಸಿನಿಮಾ ಮೂಡಿಬರುತ್ತಿದ್ದು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಸಿನಿಮಾದ ಟೈಟಲ್ಲೇ ಹೇಳುವಂತೆ, ಸಿನಿಮಾ ಕೂಡ “ಲವ್‌ ಲೀ’ ಆಗಿಯೇ ಬಂದಿದೆ. ಹಲವು ಭಾವನೆಗಳನ್ನು ತೋರಿಸುವಂತಹ ಅವಕಾಶ ಈ ಪಾತ್ರದಲ್ಲಿದೆ’ ಎನ್ನುವುದು ನಾಯಕ ವಸಿಷ್ಠ ಮಾತು.