Current Date 25 Aug, 2026

ತರುಣ್- ಸೋನಲ್‌ ಜೋಡಿಗೆ ಆಶೀರ್ವದಿಸಿದ ದರ್ಶನ್; ಫೋಟೋ ವೈರಲ್

ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. 3 ದಿನಗಳ ಕಾಲ ವಿವಿಧ ಮದುವೆ ಶಾಸ್ತ್ರಗಳು ನಡೆದವು. ಚಿತ್ರರಂಗದ ಹಲವರು ಮದುವೆ ಸಮಾರಂಭಕ್ಕೆ ಹಾಜರಾಗಿ ನವ ವಧು-ವರರನ್ನು ಆಶೀರ್ವದಿಸಿದರು. ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತಾರಾಲೋಕವೇ ಧರೆಗಿಳಿದಿತ್ತು.

'ರಾಬರ್ಟ್' ಚಿತ್ರದಲ್ಲಿ ತರುಣ್ ಹಾಗೂ ಸೋನಲ್ ಒಟ್ಟಿಗೆ ಕೆಲಸ ಮಾಡಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪರಿಚಯ ಶುರುವಾಗಿತ್ತು. ಆ ಸ್ನೇಹ ಮುಂದೆ ಪ್ರೀತಿ ತಿರುಗಿ ಇದೀಗ ಮದುವೆಯ ಮುದ್ರೆ ಬಿದ್ದಿದೆ. ಆದರೆ 'ರಾಬರ್ಟ್' ಸಿನಿಮಾ ಸಮಯದಲ್ಲಿ ನಮ್ಮಿಬ್ಬರನ್ನು ದರ್ಶನ್ ರೇಗಿಸುತ್ತಿದ್ದರು. ಆಗ ನಮ್ಮಿಬ್ಬರ ನಡುವೆ ಯಾವುದೇ ಪ್ರೀತಿ ಇರಲಿಲ್ಲ. 'ಕಾಟೇರ' ಸಿನಿಮಾ ಸಮಯದಲ್ಲಿ ಇಬ್ಬರೂ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡೆವು ಎಂದು ತರುಣ್ ಹೇಳಿದ್ದರು.