Current Date 25 Aug, 2026

ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?


ಪ್ರಭಾವಿ ರಾಜಕಾರಣಿಯೊಬ್ಬರ ಹತ್ತಿರದ ಸಂಬಂಧಿ ಎನ್ನಲಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 13ನೇ ಆರೋಪಿ ದೀಪಕ್‌ನನ್ನು ರಕ್ಷಿಸಲು ಹಾಗೂ ನಟ ದರ್ಶನ್‌ ಅವರನ್ನು ಪ್ರಕರಣದಿಂದ ಪಾರು ಮಾಡಲು ಕಸರತ್ತು ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಪೊಲೀಸರು ಮಾತ್ರ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.


ದರ್ಶನ್‌ ಮತ್ತು 13ನೇ ಆರೋಪಿ ದೀಪಕ್‌ನನ್ನು ಪ್ರಕರಣದಿಂದ ಪಾರು ಮಾಡಲು ಆತನ ಕಡೆಯವರು ದೊಡ್ಡ ಮೊತ್ತದ ಡೀಲ್‌ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ. ದೀಪಕ್‌ ಪ್ರಭಾವಿ ರಾಜಕಾರಣಿ ಸಂಬಂಧಿಯಾಗಿರುವುದರಿಂದ ಆತನನ್ನು ಪ್ರಕರಣದಿಂದ ಹೊರಗಿಡಲು ಪ್ರಯತ್ನ ನಡೆದಿರುವ ಗುಮಾನಿ ಹುಟ್ಟಿಕೊಂಡಿದೆ. ದೀಪಕ್‌ ಫೋಟೋ ಸಹ ಹೊರಬಾರದಂತೆ ನೋಡಿಕೊಳ್ಳಲಾಗಿತ್ತು. ಈತನನ್ನು ಅಪ್ರೂವರ್‌ ಮಾಡಿಕೊಂಡು ಪ್ರಕರಣದಿಂದ ಕೈ ಬಿಡುವ ಚಿಂತನೆ ನಡೆದಿತ್ತು ಎನ್ನಲಾಗುತ್ತಿದೆ. ಜೊತೆಗೆ ದರ್ಶನ್‌ ರಕ್ಷಣೆಗೂ ಪ್ರಭಾವಿಗಳಿಂದ ಒತ್ತಡ ಬರಲಾರಂಭಿಸಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.