Current Date 15 May, 2026

"ಯಾವಾಗ ಬಂದ್ರೂ, ಯಾವಾಗ ಅಂದ್ರೂ, ಅದೇನೆ ಪರಿಸ್ಥಿತಿ ಇದ್ರೂ, ನಾನು ಸಿನಿಮಾ ಮಾಡ್ತೀನಿ"; ತರುಣ್ ಸುಧೀರ್

ದರ್ಶನ್ ಸದ್ಯದ ಪರಿಸ್ಥಿತಿ ಕಂಡು ಅವರ ಆಪ್ತರು ಕಂಗಾಲಾಗಿದ್ದಾರೆ. ದರ್ಶನ್ ತಪ್ಪು ಮಾಡಿದ್ದಾರೋ ಇಲ್ಲವೋ? ಗೊತ್ತಾಗದೇ ತಲೆ ಕೆಡಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು ಅನ್ನೋದು ತಿಳಿಯುತ್ತಿಲ್ಲ. ಅದರಲ್ಲಿ ನಿರ್ದೇಶಕ ತರುಣ್ ಸುಧೀರ್ ಕೂಡ ಒಬ್ಬರು.

ದರ್ಶನ್ ಬಂಧನವಾಗಿ ಒಂದು ತಿಂಗಳಾಗಿದೆ. ಇಲ್ಲಿವರೆಗೂ ದರ್ಶನ್‌ಗೆ ಆಪ್ತರಾಗಿರುವ ನಿರ್ದೇಶಕ ತರುಣ್ ಸುಧೀರ್ ಪ್ರತಿಕ್ರಿಯೆ ನೀಡಿರಲಿಲ್ಲ. ಕೊನೆಗೂ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ. ಈ ಘಟನೆ ತಮ್ಮ ಮನಸ್ಸಿಗೆ ನೋವಾಗಿದೆ. ತನ್ನ ಅಣ್ಣನಿಗೆ ಹೀಗೆನಾದರೂ ಆಗಿದ್ದರೆ ಎಷ್ಟು ನೋವಾಗುತ್ತಿತ್ತೋ ಅಷ್ಟೇ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ.