Current Date 15 May, 2026

ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌


ಡಾ.ರಾಜ್‌ಕುಮಾರ್‌ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡುವಾಗಲಂತೂ ರಾಜ್‌ಕುಮಾರ್‌ ಸ್ವಲ್ಪ ಹೆಚ್ಚೇ ನೆನಾಪಗುತ್ತಾರೆ… ಡಾ.ರಾಜ್‌ ಇವತ್ತಿಗೂ, ಕಾಲ ಕಾಲಕ್ಕೂ ಪ್ರಸ್ತುತವಾಗುತ್ತಾರೆಂದರೆ ಅವರ ಗುಣದಿಂದ. ನಟ,ನಟಿಯರ ವೈಯಕ್ತಿಕ ಬದುಕಿರಬಹುದು, ಚಿತ್ರರಂಗದ ಅಸಡ್ಡೆ ಧೋರಣೆ ಇರಬಹುದು, ಎರಡು ವರ್ಷಕ್ಕೊಂದು ಸಿನಿಮಾ ಮಾಡುವ ಸ್ಟಾರ್‌ ನಟರ ಮನಸ್ಥಿತಿ ಇರಬಹುದು, ಅಭಿಮಾನಿಗಳನ್ನು ನಡೆಸಿಕೊಳ್ಳುವ ಕೆಲವು ಸ್ಟಾರ್‌ ನಟರ ವರ್ತನೆಗಳಿರಬಹುದು, ನಿರ್ಮಾಪಕರನ್ನು ಗೋಳಾಡಿಸುವ, ತುತ್ಛವಾಗಿ ಕಾಣುವ ರೀತಿ ಇರಬಹುದು… ಇವೆಲ್ಲವುಗಳನ್ನು ನೋಡುವಾಗ ರಾಜ್‌ಕುಮಾರ್‌ ಮತ್ತೆ ಮತ್ತೆ ನೆನಪಾಗುತ್ತಾರೆ. ಅವರ ಗುಣ ನಡತೆ, ಸಂಸ್ಕಾರ, ಅವರು ಕೊನೇವರೆಗೂ ನಡೆದುಕೊಂಡ ರೀತಿ, ಅಭಿಮಾನಿಗಳನ್ನು “ದೇವರು’ ಎಂದು ಅದರಂತೆಯೇ ಅವರನ್ನು ಗೌರವಿಸಿದ ರೀತಿಯಿಂದಾಗಿಯೇ ಮತ್ತೆ ಡಾ.ರಾಜ್‌ ನೆನಪಾಗುತ್ತಾರೆ