Current Date 25 Aug, 2026

ಚಿಕ್ಕಣ್ಣ ಹೀರೊ ಆಗಿ 2ನೇ ಸಿನಿಮಾ ಫಿಕ್ಸ್; ನಿರ್ಮಾಪಕರು, ನಿರ್ದೇಶಕರು ಯಾರು?


ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಪ್ರೇಕ್ಷಕರನ್ನು ರಂಜಿಸಿದ ಚಿಕ್ಕಣ್ಣ ಹೀರೊ ಆಗಿ ಗೆದ್ದಿದ್ದರು. ಆದರೆ ಹೀರೊ ಆಗಿಯೂ ಪ್ರೇಕ್ಷಕರನ್ನು ನಗಿಸೋ ಕಾಯಕ ಮುಂದುವರೆಸಿದ್ದಾರೆ. ಈ ವರ್ಷ ಸಕ್ಸಸ್ ಕಂಡ ಕೆಲವೇ ಕನ್ನಡಚಿಕ್ಕಣ್ಣ ಹೀರೊ ಆಗಿ ನಟಿಸಲಿರುವ 2ನೇ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ನಿರ್ಮಾಪಕರು, ನಿರ್ದೇಶಕರು ಸಿಕ್ಕಿದ್ದಾರೆ ಎನ್ನಲಾಗ್ತಿದೆ. ಇನ್ನು ಸಿನಿಮಾ ಸೆಟ್ಟೇರುವುದು ಮಾತ್ರ ಬಾಕಿಯಿದೆ. ನಿರ್ದೇಶಕ ಎ. ಪಿ ಅರ್ಜುನ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು ರಾಜ್‌ ಗುರು ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಬಂದ 'ಕೆರೆಬೇಟೆ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಮೊದಲ ಪ್ರಯತ್ನಲ್ಲದೇ ನಿರ್ದೇಶಕ ರಾಜ್‌ ಗುರು ಗೆದ್ದಿದ್ದರು. ಗೌರಿಶಂಕರ್ ಹೀರೊ ಆಗಿ ನಟಿಸಿದ್ದ ಸಿನಿಮಾ 50 ದಿನ ಪೂರೈಸಿತ್ತು. ಇದೀಗ ಅವರು ಚಿಕ್ಕಣ್ಣ ಹೀರೊ ಆಗಿ 2ನೇ ಚಿತ್ರಕ್ಕೆ ಕೈಹಾಕಿದ್ದಾರೆ. ಈ ಹಿಂದೆ 'ಅದ್ಧೂರಿ ಲವರ್' ಚಿತ್ರವನ್ನು ಎ. ಪಿ ಅರ್ಜುನ್ ನಿರ್ಮಿಸಿ, ನಿರ್ದೇಶನ ಮಾಡಿದ್ದರು.

 ಸಿನಿಮಾಗಳಲ್ಲಿ 'ಉಪಾಧ್ಯಕ್ಷ' ಕೂಡ ಒಂದಾಗಿದೆ. ಅನಿಲ್ ಕುಮಾರ್ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು.