Current Date 26 Aug, 2026

ದರ್ಶನ್ ವಿರುದ್ಧ ಕೆಂಗೇರಿ ಪೊಲೀಸರಿಂದ NCR;ಪ್ರಾಣ ಬೆದರಿಕೆ ಆರೋಪದ ಮೇಲೆ ದೂರು!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಈಗಾಗಲೇ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಎರಡನೇ ಆರೋಪಿಯಾಗಿ ಜೈಲು ಸೇರಿದ್ದಾರೆ. ಜಾಮೀನು ಪಡೆದು ಜೈಲಿನಿಂದ ಹೊರಬರಲು ಪರದಾಡುತ್ತಿದ್ದ ದರ್ಶನ್‌ಗೆ ನಿರಾಸೆಯಾಗಿದೆ. ಸೆಷನ್ಸ್ ಕೋರ್ಟ್ ದರ್ಶನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಜಾಮೀನು ಸಿಗದ ಬೇಸರದ ಹಿನ್ನೆಲೆಯಲ್ಲೇ ದರ್ಶನ್‌ಗೆ ಬೆನ್ನು ನೋವು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಹೆಚ್ಚು ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಸಲಹೆ ಮೇರೆಗೆ ಬಿಡ್ ಹಾಗೂ ದಿಂಬನ್ನು ನೀಡಲಾಗುತ್ತಿದೆ. ಬಳ್ಳಾರಿ ಜೈಲ್‌ನಿಂದ ಹೇಗಾದರೂ ಮಾಡಿ ಹೊರ ಬರಬೇಕು ಅಂತ ಪರದಾಡುತ್ತಿರುವ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಳೆ ಕೇಸ್‌ಗೆ ಪೊಲೀಸರು ಎನ್‌ಸಿಆರ್‌ ಮಾಡಿದ್ದಾರೆ.