Current Date 15 May, 2026

'ಟಾಕ್ಸಿಕ್' ಅವತಾರವೆತ್ತಿ ಲೀಲಾ ಪ್ಯಾಲೇಸ್‌ಗೆ ಬಂದ ರಾಕಿಂಗ್ ಸ್ಟಾರ್; ಶುರುವಾಯ್ತಾ ಶೂಟಿಂಗ್?


'ಕೆಜಿಎಫ್ 2' ಬಳಿಕ ರಾಕಿ ಭಾಯ್ ಹೊಸ ಸಿನಿಮಾಗೆ ಕಾದೂ ಕಾದು ಸುಸ್ತಾಗಿದ್ದ ಫ್ಯಾನ್ಸ್‌ಗೆ ಹೊಸ ಸಿನಿಮಾ ಅನೌನ್ಸ್ ಆಗಿದ್ದಷ್ಟೇ. ಆ ಬಳಿಕ ಈ ಸಿನಿಮಾದ ಬಗ್ಗೆ ಒಂದೇ ಒಂದು ಅಪ್‌ಡೇಟ್ ಕೂಡ ಸಿಕ್ಕಿರಲಿಲ್ಲ. ಯಶ್ ಲುಕ್ ರಿವೀಲ್ ಆಗಿರಲಿಲ್ಲ. ಸಿನಿಮಾ ಶೂಟಿಂಗ್ ಶುರುವಾಯ್ತಾ? ಅನ್ನೋದು ಗೊತ್ತಿರಲಿಲ್ಲ. ಆದರೆ, ಯಶ್ ಇತ್ತೀಚೆಗೆ ಹೊಸ ಅವತಾರದಲ್ಲಿ ಅಲ್ಲಲ್ಲಿ ದರ್ಶನ ಕೊಡುವುದಕ್ಕೆ ಶುರು ಮಾಡಿದ್ದಾರೆ.

ಯಶ್ ಮುಂದಿನ ಸಿನಿಮಾಗೆ ಇಡೀ ದೇಶವೇ ಎದುರು ನೋಡುತ್ತಿದೆ. ಸದ್ಯ ರಾಕಿ ಭಾಯ್ ಹೊಸ ಅವತಾರ ಅವರ ಫ್ಯಾನ್ಸ್‌ಗೆ ಸಖತ್ ಕಿಕ್ ಕೊಟ್ಟಿರುವುದಂತೂ ಸತ್ಯ. ಇತ್ತೀಚೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಯಶ್ ಲುಕ್ ರಿವೀಲ್ ಆಗಿತ್ತು. ಅಲ್ಲಿಂದ ಯಶ್ 'ಟಾಕ್ಸಿಕ್' ಲುಕ್ ರಾಕಿ ಅಭಿಮಾನಿಗಳಿಗೆ ಕಿಕ್ ಕೊಡುವುದಕ್ಕೆ ಶುರುವಾಗಿತ್ತು.