Current Date 15 Oct, 2026

ಕನ್ನಡದ ಚಿತ್ರರಂಗದ ಕ್ರಾಂತಿಕಾರಿ ಸಿನಿಮಾ 'ಔಟ್ ಆಫ್ ಸಿಲಬಸ್'; ರಿಲೀಸ್ ಯಾವಾಗ?

'ಸಿಲಬಸ್' ಅನ್ನುವ ಪದವನ್ನು ಎಲ್ಲರೂ ಕೇಳಿಯೇ ಇರುತ್ತಾರೆ. ಈಗಂತೂ ಒಂದನೇ ತರಗತಿಯಿಂದಲೇ ಸಿಲಬಸ್ ಬಗ್ಗೆ ಮಾತುಗಳು ಕೇಳಿ ಬರುವುದಕ್ಕೆ ಶುರುವಾಗುತ್ತವೆ. ಈಗ ಅದೇ ಹೆಸರು ಇಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾವೊಂದನ್ನು ನಿರ್ಮಾಣ ಮಾಡಲಾಗಿದೆ. ಅದುವೇ 'ಔಟ್ ಆಫ್ ಸಿಲಬಸ್'.

'ಔಟ್ ಆಫ್ ಸಿಲಬಸ್' ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಪ್ರದೀಪ್ ದೊಡ್ಡಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರದೀಪ್ ದೊಡ್ಡಯ್ಯ ಅವರೇ ಈ ಸಿನಿಮಾವನ್ನು ನಿರ್ದೇಶನ ಕೂಡ ಮಾಡಿರುವುದು ವಿಶೇಷ. ಸಿನಿಮಾ ತಂಡ ಈಗಾಗಲೇ 'ಔಟ್ ಆಫ್ ಸಿಲಬಸ್' ಒಂದು ಕ್ರಾಂತಿಕಾರಿ ಸಿನಿಮಾವೆಂದು ಹೇಳಿಕೊಂಡಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.