Current Date 25 Aug, 2026

''ದರ್ಶನ್ ಜೈಲಿಗೆ ಹೋದ ವಿಚಾರ ನನಗೆ ಗೊತ್ತಿರಲಿಲ್ಲ'' : ಶರ್ಮಿಳಾ ಮಾಂಡ್ರೆ...!

ಒಂದು ಕಡೆ ಜನಪ್ರಿಯತೆಯ ಅಮಲಿನಲ್ಲಿ ಮೈ ಮರೆತು ದರ್ಶನ್ ಜೈಲು ಪಾಲಾಗಿದ್ದಾರೆ. ಇನ್ನೊಂದು ಕಡೆ ವಿವೇಚನೆಯನ್ನು ಕಳೆದುಕೊಂಡು, ಮಾನವೀಯತೆಯನ್ನೇ ಮರೆತವರಂತೆ ಇವರ ಕೆಲ ಅಂಧಾಭಿಮಾನಿಗಳು ವರ್ತಿಸುತ್ತಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿ ನೀಡಿರುವ ಖೈದಿ ನಂಬರ್ 6016 ಎನ್ನುವ ನಂಬರನ್ನೂ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಹಚ್ಚೆ ಹಾಕಿಸಕೊಳ್ಳುತ್ತಿದ್ದಾರೆ.

ಇನ್ನೂ.. ದರ್ಶನ್ ವಿಚಾರದಲ್ಲಿ ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಜನ ಮಾತನಾಡಿದ್ದಾರೆ. ಕೆಲವರು ದರ್ಶನ್ ಪರ ವಕಾಲತ್ತು ವಹಿಸಿದ್ದರೆ, ಇನ್ನೂ ಕೆಲವರು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು ಮಾತ್ರ ದರ್ಶನ್ ವಿರುದ್ಧ ಮಾತನಾಡಿದ್ದಾರೆ. ಇದರ ನಡುವೆ ದರ್ಶನ್ ಜೈಲಿಗೆ ಹೋದ ವಿಚಾರವೇ ನನಗೆ ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ಶರ್ಮಿಳಾ ಮಾಂಡ್ರೆ ಅಚ್ಚರಿ ಮೂಡಿಸಿದ್ದಾರೆ.