Current Date 15 Oct, 2026

ಕೊನೆಗೂ ದರ್ಶನ್ ಭೇಟಿ ಮಾಡಿದ ಸಾಧು ಕೋಕಿಲಾ; ಜೈಲಿನೊಳಗೆ ಹೇಗಿದ್ದಾರೆ ದಾಸ?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದಾರೆ. ಈ ಕಾರಣಕ್ಕೆ ಪರಪ್ಪನ ಅಗ್ರಹಾರ ಜೈಲ್‌ಗೆ ವಿಸಿಟ್ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನ ಕನ್ನಡ ಚಿತ್ರರಂಗದಿದ ಒಬ್ಬರಲ್ಲ ಒಬ್ಬರು ಭೇಟಿ ಮಾಡುತ್ತಲೇ ಇದ್ದಾರೆ. ದರ್ಶನ್ ಆತ್ಮೀಯರಾಗಿರುವವರು ಭೇಟಿ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಕನ್ನಡ ಚಿತ್ರರಂಗದ ಹಾಸ್ಯ ನಟ ಸಾಧು ಕೋಕಿಲಾ ಭೇಟಿ ಮಾಡುವುದಕ್ಕೆ ಬಂದಿದ್ದರು. ಆದರೆ, ಆ ವೇಳೆ ದರ್ಶನ್ ಅವರನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಸಂಬಂಧ ಇಂದು (ಜುಲೈ 25) ಮತ್ತೆ ಪರಪ್ಪನ ಅಗ್ರಹಾರದ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿ, ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.