ಸಿನಿಮಾ ತಾರೆಯರಿಗೆ ತಮ್ಮ ಮಕ್ಕಳೂ ಸಿನಿಮಾದಲ್ಲಿ ಸ್ಟಾರ್‌ಗಳಾಗಬೇಕು ಅನ್ನೋ ಹಂಬಲ ಇರುತ್ತೆ. ತಮ್ಮಂತೆಯೇ ಮಕ್ಕಳನ್ನು ಚಿತ್ರರಂಗದಲ್ಲಿ ಸಕ್ಸಸ್‌ಫುಲ್ ಆಗಬೇಕು ಅಂತ ಬಯಸುತ್ತಾರೆ. ಅದಕ್ಕಾಗಿ ಒಂದು ತಯಾರಿ ಮಾಡಿಸಿ, ಬಳಿಕ ಚಿತ್ರರಂಗಕ್ಕೆ ಕರೆದುಕೊಂಡು ಬರುತ್ತಾರೆ. ಅದೇ ಹಾದಿಯಲ್ಲಿ ಕನಸಿನ ರಾಣಿ ಮಾಲಾಶ್ರೀ ಕೂಡ ಸಾಗುತ್ತಿದ್ದಾರೆ
ಕೆಲವು ತಿಂಗಳ ಹಿಂದೆಷ್ಟೇ ಮಾಲಾಶ್ರೀ ಪುತ್ರಿ ಆರಾಧನಾ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಅಮ್ಮನಂತ ಆರಾಧನಾ ರಾಮ್‌ಗೂ ಮೊದಲ ಸಿನಿಮಾದಲ್ಲಿ ಗ್ರ್ಯಾಂಡ್ ಸಕ್ಸಸ್ ಸಿಕ್ಕಿತ್ತು. ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತಹ ಸೂಪರ್‌ಸ್ಟಾರ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಪಕ್ಕ ಹಳ್ಳಿ ಹುಡುಗಿಯಾಗಿ 'ಕಾಟೇರ' ಸಿನಿಮಾ ನಟಿಸಿ ಕನ್ನಡಿಗರು ಮನೆಗೆದ್ದಿದ್ದರು.