Current Date 25 Aug, 2026

ಬರ್ತ್‌ಡೇ ಸಂಭ್ರಮದಲ್ಲಿ ಮೇಘಾ ಶೆಟ್ಟಿ; ಮೂರು ಸಿನಿಮಾಗಳ ಬಗ್ಗೆ ಏನಿದು ಸುದ್ದಿ?

ಕಿರುತೆರೆಯಲ್ಲಿ ಮಿಂಚಿದ್ದ ನಟಿ ಮೇಘಾ ಶೆಟ್ಟಿ ಈಗ ನಾಯಕಿಯಾಗಿ ಬಡ್ತಿ ಪಡೆದಿದ್ದಾಗಿದೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರಬರುತ್ತಿದ್ದಂತೆ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಕೆಲವು ದಿನಗಳಿಂದ ಮೇಘಾ ಶೆಟ್ಟಿ ಸೈಲೆಂಟ್ ಆಗಿದ್ದರು. ಅವರ ಸಿನಿಮಾಗಳ ಬಗ್ಗೆ ಸುದ್ದಿನೇ ಇರಲಿಲ್ಲ.

ಮೇಘಾ ಶೆಟ್ಟಿ ಸಿನಿಮಾಗಳ ಬಗ್ಗೆ ಸುದ್ದಿ ಇರದೇ ಹೋದರೂ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ತಮ್ಮ ಅಭಿಮಾನಿಗಳಿಗಾಗಿ ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ಹೊಸ ಹೊಸ ಫೋಟೊಶೂಟ್‌ಗಳನ್ನು ಶೇರ್ ಮಾಡುತ್ತಿದ್ದರು. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ನಟಿಗೆ ಇಂದು (ಆಗಸ್ಟ್ 4) ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟಿ ಮೇಘಾ ಶೆಟ್ಟಿ ನಟಿಸುತ್ತಿರುವ ಎರಡು ಸಿನಿಮಾಗಳ ತಂಡ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.