Current Date 18 Oct, 2026

ಥಿಯೇಟರ್, ಓಟಿಟಿ ಬಿಡಿ, ಯೂಟ್ಯೂಬ್‌ಗೆ ಸಿನಿಮಾ ಹಾಕಿ!; ಕನ್ನಡದ ಖ್ಯಾತ ನಿರ್ದೇಶಕನ ಸಲಹೆ

ಚಿತ್ರರಂಗ ನಿಧಾನವಾಗಿ ಬದಲಾಗುತ್ತಿದೆ. ಈಗ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು ಎನ್ನುವ ಅವಶ್ಯಕತೆಯಿಲ್ಲ. ತೆರೆಗೆ ಬಂದ 20 ದಿನಕ್ಕೆಲ್ಲಾ ಓಟಿಟಿಗೆ ಸಿನಿಮಾ ಬರ್ತಿದೆ. ಡಿಟಿಹೆಚ್‌ನಲ್ಲಿ ಹಣ ಪಾವತಿಸಿ ಸಿನಿಮಾ ನೋಡುವ ಅವಕಾಶವೂ ಇದೆ. ಇದೆಲ್ಲದರ ನಡುವೆ ಯೂಟ್ಯೂಬ್‌ಗೆ ನೇರವಾಗಿ ಸಿನಿಮಾ ಅಪ್‌ಲೋಡ್ ಮಾಡಿ ಎಂದು ನಿರ್ದೇಶಕ ಪವನ್ ಕುಮಾರ್ ಸಲಹೆ ನೀಡಿದ್ದಾರೆ

ತಂತ್ರಜ್ಞಾನ ಬೆಳೆದಂತೆ ಸಿನಿಮಾ ಮೇಕಿಂಗ್ ಸ್ಟೈಲ್ ಬದಲಾಗಿದೆ. ಅಷ್ಟೇ ಅಲ್ಲ ಸಿನಿಮಾ ಪ್ರದರ್ಶನಕ್ಕೆ ಬೇರೆ ಬೇರೆ ವೇದಿಕೆ ಲಭ್ಯವಿದೆ. ಕೇವಲ ಮೊಬೈಲ್ ಫೋನ್‌ನಲ್ಲೇ ಸಿನಿಮಾ ಚಿತ್ರೀಕರಣ ಮಾಡುವವರು ಇದ್ದಾರೆ. ಸಿನಿಮಾ ಅನ್ನೋದು ಹೆಚ್ಚು ಹಣ ಕೇಳುವ ಮಾಧ್ಯಮ. ಹಣ ಹಾಕಿ ಸಿನಿಮಾ ಮಾಡಿದರೆ ಮಾತ್ರ ಅದನ್ನು ಪ್ರದರ್ಶನ ಮಾಡಿ ಹಣ ವಾಪಸ್ ಪಡೆಯಲು ಸಾಧ್ಯ. ಹಾಗಂತ ಎಲ್ಲರೂ ದೊಡ್ಡ ಸಿನಿಮಾಗಳನ್ನು ಮಾಡುತ್ತಾ ಕೂರಲು ಸಾಧ್ಯವಿಲ್ಲ.