ಕನ್ನಡ ಚಿತ್ರರಂಗದಲ್ಲೀಗ ಡಿವೋರ್ಸ್ ಪ್ರಕರಣಗಳ ಸದ್ದು ಜೋರಾಗಿದೆ. ಇದೀಗ ನಟ ದುನಿಯಾ ವಿಜಯ್ ಹಾಗೂ ಮೊದಲ ಪತ್ನಿ ನಾಗರತ್ನ ವಿಚ್ಛೇದನ ಅರ್ಜಿಯ ವಿಚಾರಣೆ ನಡೆಯುತ್ತಿದ್ದು ಇಂದು ಅಂತಿಮ ತೀರ್ಪು ಹೊರ ಬೀಳುವ ನಿರೀಕ್ಷೆಯಿದೆ. 6 ವರ್ಷಗಳ ಹಿಂದೆ ದುನಿಯಾ ವಿಜಯ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ಮೊದಲಿಗೆ 2013ರಲ್ಲಿ ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ದುನಿಯಾ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನಾಗರತ್ನ ಇದಕ್ಕೆ ನಿರಾಕರಿಸಿದ್ದರು. ಬಳಿಕ ರಾಜಿ-ಸಂಧಾನ ನಡೆದು ಎಲ್ಲವೂ ಸರಿ ಹೋಯಿತು ಎನ್ನುವಂತಾಗಿತ್ತು. ಒಂದಷ್ಟು ಷರತ್ತುಗಳ ಅನ್ವಯ ವಿಜಯ್-ನಾಗರತ್ನ ಜೊತೆ ಒಟ್ಟಿಗೆ ಜೀವನ ಸಾಗಿಸಲು ಒಪ್ಪಿಕೊಂಡಿದ್ದರು.