Current Date 25 Aug, 2026

ದರ್ಶನ್ ಬಟ್ಟೆಯ ಮೇಲಿದ್ದ ರಕ್ತದ ಕಲೆ ಹೇಳಿದ ಸತ್ಯವೇನು ? ಪೊಲೀಸರಿಗೆ ಸಿಕ್ತಾ ಪ್ರಬಲ ಸಾಕ್ಷಿ..?


ಇನ್ನೇನು ಕೆಲ ದಿನ. ಈ ಹನ್ನೊಂದನೇ ತಾರೀಖಿಗೆ ದರ್ಶನ್ ಪರಪ್ಪನ ಅಗ್ರಹಾರದ ಪಾಲಾಗಿ ಎರಡು ತಿಂಗ್ಳಾಗಲಿವೆ. ಇಲ್ಲಿಯವರೆಗೆ ದರ್ಶನ್ ಅವರನ್ನು ಹೊರತರುವ ಪ್ರಯತ್ನಗಳು ನಡೆದಿವೆ. ಆದರೆ.. ಫಲಪ್ರದವಾಗಿಲ್ಲ. ಹೀಗಾಗಿಯೇ ದರ್ಶನ್ ಅವರ ಭಕ್ತಗಣ ಚಿಂತೆಯಲ್ಲಿ ಮುಳುಗಿದೆ. ಹೀಗಿರುವಾಗ ದರ್ಶನ್ ಬಟ್ಟೆಯ ಮೇಲೆ ಪಟ್ಟಣಗೆರೆ ಶೆಡ್‌ನಲ್ಲಿ ಕೊನೆಯುಸಿರೆಳೆದ ರೇಣುಕಾ ಸ್ವಾಮಿಯ ರಕ್ತದ ಕಲೆ ಪತ್ತೆಯಾಗಿವೆ ಎಂಬ ಸುದ್ದಿಯನ್ನು ಮಾಧ್ಯಮಗಳು ವರದಿ ಮಾಡಿವೆ.