Current Date 15 Oct, 2026

ಕಮಲ ಮಹಲ್, ಸೋಲ್ಜರ್ 'ಭೈರವ'; ಏನ್ ಪಾಠ ಹೇಳ್ತಿದ್ದಾರೆ ಹೇಮಂತ್ ರಾವ್?

ಕಮಲ ಮಹಲ್, ಸೋಲ್ಜರ್ 'ಭೈರವ'; ಏನ್ ಪಾಠ ಹೇಳ್ತಿದ್ದಾರೆ ಹೇಮಂತ್ ರಾವ್?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಇನ್ನು ಎರಡು ದಿನ ಬಾಕಿಯಿದೆ. ಆದರೆ ಈಗಾಗಲೇ ಸೆಲೆಬ್ರೇಷನ್ ಶುರುವಾಗಿಬಿಟ್ಟಿದೆ. ಶಿವಣ್ಣನ ಮುಂದಿನ ಸಿನಿಮಾಗಳ ಚಿತ್ರತಂಡಗಳಿಂದ ಸರ್‌ಪ್ರೈಸ್‌ಗಳು ಒಂದೊಂದಾಗಿ ಹೊರ ಬರ್ತಿದೆ. ಸದ್ಯ 'ಭೈರವನ ಕೊನೆ ಪಾಠ' ಸಿನಿಮಾ ಖಡಕ್ ಪೋಸ್ಟರ್‌ಗಳು ಹೊರ ಬಂದಿದೆ.

'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿ ಹೇಮಂತ್ ರಾವ್ ಕಟ್ಟಿಕೊಡುತ್ತಿರುವ ಸಿನಿಮಾ 'ಭೈರವನ ಕೊನೆ ಪಾಠ'. ಶಿವಣ್ಣ- ಹೇಮಂತ್ ಕಾಂಬಿನೇಷನ್‌ ಇನ್ನಿಲ್ಲದ ನಿರೀಕ್ಷೆ ಹುಟ್ಟಾಕ್ಕಿದೆ. ಅದಕ್ಕೆ ತಕ್ಕಂತೆ ವಿಭಿನ್ನ ಟೈಟಲ್‌ನಲ್ಲಿ ಹೊಸ ಸಿನಿಮಾ ನಿರ್ಮಾಣವಾಗಲಿದೆ. ಅಧಿಕೃತವಾಗಿ ಪೋಸ್ಟರ್‌, ಟೈಟಲ್ ಸಮೇತ ಸಿನಿಮಾ ಘೋಷಣೆ ಆಗಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.