ರಿಯಲ್ ಸ್ಟಾರ್ ಉಪೇಂದ್ರ 'ಯುಐ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ 'ಎ' ಸಿನಿಮಾ ಹೊಸ ರೂಪದಲ್ಲಿ ಬಿಡುಗಡೆ ಆಗಿ ಸದ್ದು ಮಾಡಿತ್ತು. ಅಭಿಮಾನಿಗಳು ಮತ್ತೊಮ್ಮೆ ಮುಗಿಬಿದ್ದು ಸಿನಿಮಾ ನೋಡಿದ್ದರು. ಇದೀಗ 'ಎ' ಸಿನಿಮಾ ತೆಲುಗಿನಲ್ಲಿ ಮತ್ತೆ ರಿಲೀಸ್‌ಗೆ ರೆಡಿಯಾಗಿದೆ.
ಇದೇ ಶುಕ್ರವಾರ 'ಎ' ಸಿನಿಮಾ ತೆಲುಗು ಪ್ರೇಕ್ಷಕರ ಮುಂದೆ ಹೋಗುತ್ತಿದೆ. 90ರ ದಶಕದಲ್ಲೇ ತಮ್ಮ ವಿಭಿನ್ನ ಆಲೋಚನೆಗಳು, ಸಿನಿಮಾ ಸ್ಟೈಲ್‌ನಿಂದ ಉಪೇಂದ್ರ ಭಾರೀ ಸದ್ದು ಮಾಡಿದ್ದರು. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿ ಉಪ್ಪಿ ಕ್ರೇಜ್ ಶುರುವಾಗಿತ್ತು. ತೆಲುಗಿಗೆ 'ಓಂ' ಸಿನಿಮಾ ರೀಮೆಕ್ ಮಾಡಿದ್ದರು. ಬಳಿಕ ಚಿರಂಜೀವಿ ಜೊತೆ ಸಿನಿಮಾ ಮಾತುಕತೆ ನಡೆದಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಮತ್ತೊಮ್ಮೆ ರಿಯಲ್ ಸ್ಟಾರ್ ಮಾತನಾಡಿದ್ದಾರೆ.