Current Date 15 May, 2026

"ಮೊದಲು ದರ್ಶನ್ ಜೈಲಿಗೆ ಹೋಗಿ 15 ದಿನ ಇದ್ದರು, ಅಲ್ಲಿ ನನ್ನ ಪಾತ್ರವೂ ಇದೆ": ರಾಮಚಂದ್ರ ಗುರೂಜಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸ್ಪಿರಿಚ್ಯುವಲ್ ಗುರು ಡಾ. ಶ್ರೀ ರಾಮಚಂದ್ರ ಗುರೂಜಿ ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಮಾತಾಡಿದ್ದೆ ಎಂದು ಹೇಳಿ ಸುದ್ದಿಯಲ್ಲಿ ಇದ್ದರು. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಅಪ್ಪು ಆತ್ಮದ ಬಳಿ ಮೂರು ಪ್ರಶ್ನೆಗಳನ್ನು ಕೇಳಿದ್ದೆ ಎಂದು ಹೇಳಿದ್ದರು. ಈಗ ಮತ್ತೆ ದರ್ಶನ್ ಬಗ್ಗೆ ಹೇಳಿಕೆ ಕೊಟ್ಟು ಸುದ್ದಿಯಲ್ಲಿದ್ದಾರೆ.

ಮತ್ತೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಪುನರ್ಜನ್ಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಈ ಸಂದರ್ಶನದಲ್ಲಿ ದರ್ಶನ್ ಮೊದಲ ಬಾರಿಗೆ ಜೈಲಿಗೆ ಹೋದಾಗ ಅಲ್ಲಿ ನನ್ನ ಪಾತ್ರವೂ ಇತ್ತು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ರಾಮಚಂದ್ರ ಗುರೂಜಿಯ ಈ ಹೇಳಿಕೆಯ ಉದ್ದೇಶವೇನು? ಈ ಸಂದರ್ಶನದ ಝಲಕ್ ಹೀಗಿದೆ.