Current Date 25 Aug, 2026

''ದರ್ಶನ್​ನ ಬಿಟ್ಟು ಕೊಡ್ಬೇಡ ಕಂದಾ ಅಂತ ಅಂದಿದ್ರು ಅಮ್ಮ'' - ವಿನೋದ್ ರಾಜ್...!


ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾಗಿರಲಿಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್ ಆಗಿತ್ತು. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಸದ್ಯಕ್ಕೆ ಕೋಪದ ಕೈಗೆ ಬುದ್ದಿ ಕೊಟ್ಟಾಗ ಏನಾಗುತ್ತೆ ಅನ್ನುವುದಕ್ಕೆ ತಾಜಾ ನಿದರ್ಶನವಾಗಿದ್ದು ದುರ್ದೈವ.

ಇಂಥಾ ದರ್ಶನ್ ಅವರನ್ನು ಇಲ್ಲಿಯವರೆಗೆ ಕನ್ನಡ ಚಿತ್ರರಂಗದಿಂದ ಅನೇಕರು ಹೋಗಿ ಜೈಲಿನಲ್ಲಿ ಭೇಟಿಯಾಗಿದ್ದಾರೆ. ಮಾತನಾಡಿದ್ದಾರೆ. ದು:ಖವನ್ನೂ ಹಂಚಿಕೊಂಡಿದ್ಧಾರೆ. ಈ ಸಾಲಿಗೀಗ ಸೇರಿರುವ ವಿನೋದ್ ರಾಜ್ ತಮ್ಮ ಮನದ ನೋವನ್ನೂ ಹೊರ ಹಾಕಿದ್ದಾರೆ.