Current Date 15 Oct, 2026

ಮಲೆನಾಡಿನ ಪರಿಸರ, ರಕ್ತದ ಹೊಳೆ, ವಿನಯ್ ರಾಜ್ ಕುಮಾರ್ ''ಪೆಪೆ'' ಬಿಡುಗಡೆ ಯಾವಾಗ..?

''ಸಿದ್ದಾರ್ಥ'' ಸಿನಿಮಾದ ಮೂಲಕ ವಿನಯ್ ರಾಜ್ ಕುಮಾರ್ ಲಾಂಚ್ ಆದಾಗ ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದ ವಲಯದಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮೊದಲ ಸಿನಿಮಾನೇ ಅಂದುಕೊಂಡಂತೆ ಆಗಲಿಲ್ಲ. ಎರಡನೇದಾದರೂ ಕೈ ಹಿಡಿಯಬಹುದು ಅಂದುಕೊಂಡಿದ್ದರು. ಆದರೆ.. ''ರನ್ ಆಂಟನಿ'' ಕೂಡ ಗೆಲ್ಲಲಿಲ್ಲ. ಇದೇ ಹೊತ್ತಲ್ಲಿ ದೇವನೂರು ಚಂದ್ರು ನಿರ್ದೇಶನದ ''ಗ್ರಾಮಾಯಣ'' ಸಿನಿಮಾದ ಕಂಟೆಂಟು ಎಲ್ಲರನ್ನೂ ಆಕರ್ಷಿಸಿತು. ಆದರೆ ನಿರ್ಮಾಪಕರ ಅಕಾಲಿಕ ಮರಣದಿಂದ ಬಿಡುಗಡೆಯಾಗದೇ ಉಳಿಯಿತು. ಪುಷ್ಕರ್ ಮಲ್ಲಿಕಾರ್ಜುನ ನಿರ್ಮಾಣದ ʻ'ಟೆನ್'ʼ ಎನ್ನುವ ಸಿನಿಮಾ ಬಿಡುಗಡೆಯಾಗಿದ್ದು ಹೋಗಿದ್ದು ಗೊತ್ತಾಗಲೇ ಇಲ್ಲ.