'ರಾಬರ್ಟ್', 'ಕಾಟೇರ'ದಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂತೇರೋ ಇನ್ನೇನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಜೋಡಿಯ ಮದುವೆ ಬಗ್ಗೆನೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಕೊನೆಗೂ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂತೇರೋ ಇಬ್ಬರೂ ಅಧಿಕೃತವಾಗಿ ಮದುವೆ ಆಗುತ್ತಿರುವ ವಿಷಯವನ್ನು ಅನೌನ್ಸ್ ಮಾಡಿದ್ದಾರೆ.
ಇಂದು (ಜುಲೈ 22) ತರುಣ್ ಸುಧೀರ್ ಹಾಗೂ ಸೋನಾಲ್ ಮಾಂತೆರೋ ಇಬ್ಬರೂ ಮದುವೆ ಬಗ್ಗೆ ವಿಡಿಯೋ ರಿಲೀಸ್ ಮಾಡಿ, ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. "ನನ್ನ ನಾಯಕಿ ಸೋನಾಲ್ ಜೊತೆಗಿನ ನನ್ನ ಶ್ರೇಷ್ಠ ಪ್ರೇಮಕಥೆಯನ್ನು ನಿರ್ದೇಶಿಸುತ್ತಿದ್ದೇನೆ" ಎಂದು ಬರೆದು ತರುಣ್ ಸುಧೀರ್ ಬರೆದುಕೊಂಡಿದ್ದರೆ, " ಶ್ರೇಷ್ಠ ಪ್ರೇಮಕಥೆಯಲ್ಲಿ ನಾನು ನನ್ನ ಜೆಂಟಲ್‌ಮನ್ ತರುಣ್ ಜೊತೆ ನಟಿಸುತ್ತಿದ್ದೇನೆ" ಎಂದು ವೀಡಿಯೋ ಪೋಸ್ಟ್ ಮಾಡಿ ಸೋನಾಲ್ ಬರೆದುಕೊಂಡಿದ್ದಾರೆ.