ಸದಾ ಒಂದಿಲ್ಲೊಂದು ಸಿನಿಮಾಗಳಲ್ಲಿ ಸಕ್ರಿಯಸಾಗಿರುವ ಸಾಲು ಸಿನಿಮಾಗಳ ಸರದಾರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸದ್ಯ ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ನಟರ ಪೈಕಿ ಟಾಪ್ 5 ನಲ್ಲಿರುವ ನಟ.
ನವ ನಟರನ್ನು ಬೆಚ್ಚಿ ಬೆರಗಾಗಿ ನೋಡುವಂತೆ ಮಾಡಬಲ್ಲ, ಎನರ್ಜಿಯಲ್ಲಿ ನಟನೆಯ ಚಾಪು ಮೂಡಿಸುವ ಶಿವಣ್ಣ ಜೊತೆ ಈ ಶುಕ್ರವಾರ ಹುಟ್ಟುಹಬ್ಬದ ನೆಪದಲ್ಲಿ ಒಂದು ಇಡೀ ದಿನ ಕಳಿಯಬೇಕು ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಈಗ ಆ ಆಸೆ ಬತ್ತಿ ಹೋಗಿದೆ. ಯಾಕೆಂದರೆ.. ಖುದ್ದು ಸಾಕ್ಷಾತ್ ಡಾ.ಶಿವರಾಜ್ ಕುಮಾರ್ ಅವರೇ ನಾನು ಮನೆಯಲ್ಲಿರಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.