Current Date 25 Aug, 2026

"ಯಾರದ್ದೋ ಒಬ್ಬರ ಸಿನಿಮಾ ಸೋತರೆ ಖುಷಿ ಪಡುವವರಲ್ಲಿ ನಾನೊಬ್ಬ ಇದ್ದೀನಿ": ರಾಜ್‌ ಬಿ ಶೆಟ್ಟಿ ಹೀಗಂದಿದ್ಯಾಕೆ?

ಸ್ಯಾಂಡಲ್‌ವುಡ್ ಮಟ್ಟಿಗೆ ರಾಜ್ ಬಿ ಶೆಟ್ಟಿ ಒಂದು ವಿಶಿಷ್ಠ ಪ್ರತಿಭೆ. 'ಒಂದು ಮೊಟ್ಟೆಯ ಕಥೆ'ಯಿಂದ ಶುರುವಾಗಿದ್ದ ರಾಜ್ ಬಿ ಶೆಟ್ಟಿಯ ಜರ್ನಿ ಇಲ್ಲಿವರೆಗೂ ಮುಂದುವರೆಯುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ರಾಜ್ ತಮ್ಮ ಪ್ರತಿಭೆಯನ್ನು ಜನರ ಮುಂದೆ ತೋರಿಸುತ್ತಲೇ ಇರುತ್ತಾರೆ. ಈಗ ಅವರ ಮತ್ತೊಂದು ಸಿನಿಮಾ 'ರೂಪಾಂತರ' ಬಿಡುಗಡೆಗೆ ಸಜ್ಜಾಗಿ ನಿಂತಿದೆ.

'ರೂಪಾಂತರ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಗಮನ ಸೆಳೆದಿದೆ. ಇದೂ ಕೂಡ ರಾಜ್‌ ಬಿ ಶೆಟ್ಟಿಯ ವಿಶಿಷ್ಠ ಸಿನಿಮಾಗಳ ಸಾಲಿಗೆ ಸೇರುತ್ತಿದೆ. ಈ ಸಿನಿಮಾ ಇದೇ ಜುಲೈ 26ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ.