Current Date 15 May, 2026

ರಾಮನಗರ ಚಾಮುಂಡಿ ಉತ್ಸವದಲ್ಲಿ ಡಿ ಬಾಸ್ ಘೋಷಣೆ: ಕುತೂಹಲ ಮೂಡಿಸಿದ್ದೇಕೆ ಡಿಕೆ ಶಿವಕುಮಾರ್ ಹೇಳಿಕೆ?

ರೇಣುಕಾಸ್ವಾಮಿ ಹತ್ಯೆ ಪ್ರಕರಣ ದರ್ಶನ್‌ಗೆ ಸಂಕಷ್ಟ ತಂದೊಡ್ಡಿದೆ. ಜೈಲಿನಿಂದ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗುವಂತೆ ಕಾಣುತ್ತಿಲ್ಲ. ಅದೇ ಇನ್ನೊಂದು ಕಡೆ ಇವರನ್ನೇ ನಂಬಿದ್ದ ಸಿನಿಮಾ ಮಂದಿನೂ ಕಂಗಾಲಾಗಿದ್ದಾರೆ. ಈ ಮಧ್ಯೆ ದರ್ಶನ್‌ರನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರುವುದಕ್ಕೆ ಹಲವು ಕಡೆಯಿಂದ ಶತಪ್ರಯತ್ನ ನಡೆಯುತ್ತಿದೆ. ಅದಕ್ಕೆ ಸರಿಯಾಗಿ ರಾಮನಗರದ ಚಾಮುಂಡಿ ಉತ್ಸವದಲ್ಲಿ ಡಿಕೆ ಶಿವಕುಮಾರ್ ಕೊಟ್ಟ ಹೇಳಿಕೆ ಅಚ್ಚರಿ ಮೂಡಿಸಿದೆ.

ನಿನ್ನೆ (ಜುಲೈ 23) ರಾಮನಗರದಲ್ಲಿ ಅದ್ಧೂರಿಯಾಗಿ ಚಾಮುಂಡಿ ಉತ್ಸವವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರು ಆಗಮಿಸಿದ್ದರು. ಇದೇ ವೇಳೆ ಮುಖ್ಯ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಆಗಮಿಸಿದ್ದರು. ವೇದಿಕೆ ಮೇಲೆ ಡಿಕೆಶಿ ಮಾತು ಆರಂಭಿಸುತ್ತಿದ್ದಂತೆ ಅಭಿಮಾನಿಗಳು ಡಿ ಬಾಸ್ ಅಂತ ಘೋಷಣೆ ಹಾಕುವುದಕ್ಕೆ ಶುರು ಮಾಡಿದ್ದರು.