ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿ ಸುಮಾರು ಒಂದು ತಿಂಗಳಿನ ಮೇಲಾಗಿದೆ. ದರ್ಶನ್ ಈ ಸ್ಥಿತಿಯನ್ನು ಕಂಡು ಅವರ ಗ್ರಹಗತಿ ಚೆನ್ನಾಗಿಲ್ಲ ಅಂತ ಹೇಳಿದ್ದಾರೆ. ಮತ್ತೆ ಕೆಲವರು ದರ್ಶನ್ ಯಾವಾಗ ರಿಲೀಸ್ ಆಗುತ್ತಾರೆ ಅಂತ ಭವಿಷ್ಯವನ್ನು ನುಡಿಯುತ್ತಿದ್ದಾರೆ.
ಈ ಮಧ್ಯೆ ಕಾಳಿಮಾತೆ ಉಪಾಸಕಿ ಚಂದಾ ಪಾಂಡೆ ಅಮ್ಮಾಜಿ ಕೂಡ ದರ್ಶನ್ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ದರ್ಶನ್‌ಗೆ ಈ ಹಿಂದೆನೇ ಪ್ರಾಣಕ್ಕೆ ಸಂಚಕಾರವಿತ್ತು ಎಂದು ಹೇಳಿದ್ದಾರೆ. ಅಷ್ಟಕ್ಕೂ ದರ್ಶನ್ ಪ್ರಾಣಕ್ಕೆ ಎದುರಾಗಿದ್ದ ಕಂಟಕವನ್ನು ಚಂದಾ ಪಾಂಡೆ ಅಮ್ಮಾಜಿ ಹೇಗೆ ತಪ್ಪಿಸಿದರು ಅನ್ನೋದನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.