Current Date 18 Oct, 2026

"ಒಂದು ದುರ್ಘಟನೆ ನಡೀತು ಅಂದರೆ, ಅದರಿಂದ ಮಾತ್ರ ಚಿತ್ರರಂಗನಾ?"; ವಸಿಷ್ಠ ಸಿಂಹ ಮಾತಿನ ಅರ್ಥವೇನು?

"ಒಂದು ದುರ್ಘಟನೆ ನಡೀತು ಅಂದರೆ, ಅದರಿಂದ ಮಾತ್ರ ಚಿತ್ರರಂಗನಾ?"; ವಸಿಷ್ಠ ಸಿಂಹ ಮಾತಿನ ಅರ್ಥವೇನು?

ಸ್ಯಾಂಡಲ್‌ವುಡ್‌ ಸಿನಿಮಾಗಳನ್ನು ನೋಡುವುದಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಅನ್ನೋ ಅಳುಕು ಒಂದು ಕಡೆ. ಅದೇ ಇನ್ನೊಂದು ಕಡೆ ವಿವಾದ ಮೇಲೆ ವಿವಾದ. ಇದೇ ಮೂರು ನಾಲ್ಕು ವರ್ಷಗಳ ಹಿಂದೆ ಬೇರೆ ಚಿತ್ರರಂಗದವರು ಕನ್ನಡ ಚಿತ್ರರಂಗವನ್ನು ತಲೆ ಎತ್ತಿ ನೋಡುತ್ತಿದ್ದರು. ಆದ್ರೀಗ ಇತ್ತ ನೋಡುವುದೂ ಇಲ್ಲ. ಅದಕ್ಕೆ ಕಾರಣ ಯಾರು? ಕನ್ನಡ ಸಿನಿಮಾ ಮಂದಿನೇ ಹೊರತು, ಬೇರೆ ಯಾರು ಹೊಣೆ.