'ಅಯೋಗ್ಯ', 'ಮದಗಜ' ಎರಡು ಸಿನಿಮಾಗಳನ್ನು ನಿರ್ದೇಶಿಸಿದ ಬಳಿಕ ಮಹೇಶ್ ಕುಮಾರ್ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದರು. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಆ ಸಿನಿಮಾದಲ್ಲಿ ನಟಿಸಬೇಕಿತ್ತು. ರಾಕ್‌ಲೈನ್ ವೆಂಕಟೇಶ್ ಆ ಸಿನಿಮಾವನ್ನು ನಿರ್ಮಾಣ ಮಾಡಬೇಕಿತ್ತು. ಅದಕ್ಕೆ ಮಹೇಶ್ ಕುಮಾರ್ 'AA04'ಅಂತ ತಾತ್ಕಾಲಿಕ ಹೆಸರಿಟ್ಟು ಘೋಷಣೆ ಮಾಡಿದ್ದರು.
ಅಭಿಷೇಕ್ ಅಂಬರೀಶ್ ಬರ್ತ್‌ಡೇಗೆ, ಹಬ್ಬ ಹರಿದಿನಗಳಲ್ಲಿ ಈ ಸಿನಿಮಾದ ಒಂದಿಷ್ಟು ಪೋಸ್ಟರ್ ಹರಿದಾಡಿದ್ದು ಬಿಟ್ಟರೆ, ಸಿನಿಮಾ ಟೇಕಾಫ್ ಆಗಲೇ ಇಲ್ಲ. 'ಬ್ಯಾಡ್ ಮ್ಯಾನರ್ಸ್' ಗೆಲ್ಲುತ್ತೆ ಅಂದುಕೊಂಡಿದ್ದವರಿಗೆ ನಿರಾಸೆ ಆಗಿತ್ತು. ಇತ್ತ ರಾಕ್‌ಲೈನ್ ವೆಂಕಟೇಶ್ ಪ್ರಾಜೆಕ್ಟ್ ಅನ್ನು ಮುಂದೂಡಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು.