ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್ ಅಗಲಿ ಮೂರು ವರ್ಷಗಳಾಗಿವೆ. ಪವರ್ ಸ್ಟಾರ್ ನಿಜ ಜೀವನದಲ್ಲೂ ಪವರ್‌ಸ್ಟಾರ್ ಆಗಿದ್ದವರೇ. ಕೇವಲ ಸಿನಿಮಾ ಅಷ್ಟೇ ಅಲ್ಲದೆ ರಿಯಲ್ ಲೈಫ್‌ನಲ್ಲೂ ಹೀರೋ ಆಗಿ ಬದುಕಿದ್ದ ಅಪ್ಪು ಈಗ ನೆನಪು ಮಾತ್ರ. ಅವರ ನೆನಪಿನಲ್ಲೇ ಅವರ ಸಮಾಜಮುಖಿ ಕೆಲಸಗಳಲ್ಲಿ ಅವರ ಅಭಿಮಾನಿಗಳು ಭಾಗಿಯಾಗುತ್ತಿದ್ದಾರೆ. ಬದುಕಿದ್ದಾಗ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮಾಡಿದ ಸಮಾಜಮುಖಿ ಕೆಲಸಗಳು ಯಾರಿಗೂ ಗೊತ್ತಿರಲಿಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಅಪ್ಪು ನೋಡಿಕೊಂಡಿದ್ದರು. ಅವರು ಅಗಲಿದಾಗಲೇ ಪುನೀತ್ ರಾಜ್‌ಕುಮಾರ್ ಒಳ್ಳೆಯ ಕೆಲಸಗಳು ಬೆಳಕಿಗೆ ಬಂದಿದ್ದವು. ಈ ಮಧ್ಯೆ ಅಷ್ಟೊಂದು ಫಿಟ್ ಆಗಿದ್ದ ನಟ ದಿಢೀರೇ ಕಣ್ಮರೆಯಾದರೆ ಅವರ ಅಭಿಮಾನಿಗಳಿಗೆ ಹೇಗಾಗಬೇಡ. ಆಕಾಶವೇ ಕಳಚಿ ಬಿದ್ದಂತೆ ಆಗಿತ್ತು.
ಪುನೀತ್ ರಾಜ್‌ಕುಮಾರ್ ಫಿಟ್ನೆಸ್‌ಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಏನೇ ತಪ್ಪಿದರೂ ವರ್ಕ್‌ಔಟ್ ಅನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಇವರ ಫಿಟ್ನೆಸ್ ಅನ್ನು ಅದೆಷ್ಟೋ ಮಂದಿ ಯುವಕರು ಸ್ಪೂರ್ತಿಯಾಗಿ ಪಡೆದು ಫಾಲೋ ಮಾಡುತ್ತಿದ್ದರು. ಅಪ್ಪು ಅಗಲಿದಾಗ, ಅದೊಂದು ತಪ್ಪು ಮಾಡಬಾರದಿತ್ತು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರು. ಮಾಧ್ಯಮಗಳ ಜೊತೆ ಮಾತಾಡುವಾಗ ಅಪ್ಪು ಮಾಡಿದ ತಪ್ಪನ್ನು ಹೈಲೈಟ್ ಮಾಡಿದ್ದರು. ಅದೇನದು ಅಂತ ತಿಳಿಯಲು ಮುಂದೆ ಓದಿ.