Current Date 15 Oct, 2026

ಸಹೋದರಿ ಲಗ್ನ ಮಾಡಿ ಸಂಭ್ರಮಿಸಿದ ಮೇಘಾ ಶೆಟ್ಟಿ: "ಅಕ್ಕ ನಿನ್ನ ಮದುವೆ ಯಾವಾಗ?" ಎಂದ ಫ್ಯಾನ್ಸ್

'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಟಿ ಮೇಘಾ ಶೆಟ್ಟಿ. ಅನುಸಿರಿಮನೆ ಪಾತ್ರದಲ್ಲಿ ವರ್ಷಾನುಗಟ್ಟಲೇ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಮೇಘಾ ಶೆಟ್ಟಿ ಈಗ ಸಿನಿಮಾಗಳಲ್ಲಿಯೂ ಬ್ಯೂಸಿಯಾಗಿದ್ದಾರೆ. ಸದ್ಯ ಕಿರುತೆರೆಯಿಂದ ದೂರವಿರುವ ನಟಿ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.

ವೃತ್ತಿ ಜೀವನ ಒಂದು ಕಡೆಯಾದರೆ, ಇನ್ನೊಂದು ಕಡೆ ವೈಯಕ್ತಿಕ ಜೀವನಕ್ಕೂ ಸಮಯ ಕೊಟ್ಟಿದ್ದಾರೆ. ಸದ್ಯ ಸಹೋದರಿ ಮದುವೆ ಸಂಭ್ರಮದಲ್ಲಿ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಹೌದು ಸ್ಯಾಂಡಲ್‌ವುಡ್‌ನ ಚೆಲುವೆ ಮೇಘಾ ಶೆಟ್ಟಿ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಇತ್ತೀಚೆಗೆ ಸಹೋದರಿ ನಿಶಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.