Current Date 25 Aug, 2026

ಹೌದು, ನಾವು ಇಬ್ಬರೂ ದೂರವಾಗಲು ಆ ಮೂರನೇ ವ್ಯಕ್ತಿಯೇ ಕಾರಣ.. ಆದರೆ - ಚಂದನ್ ಶೆಟ್ಟಿ...!

ಹೌದು, ನಾವು ಇಬ್ಬರೂ ದೂರವಾಗಲು ಆ ಮೂರನೇ ವ್ಯಕ್ತಿಯೇ ಕಾರಣ.. ಆದರೆ - ಚಂದನ್ ಶೆಟ್ಟಿ...!

ಸಂಸಾರದಲ್ಲಿ ಸಮರಸವಿದ್ದರೆ ಮಾತ್ರ ಹೊಂದಾಣಿಕೆ ಗಟ್ಟಿಯಾಗಲು ಸಾಧ್ಯ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಮೂರನೇ ವ್ಯಕ್ತಿಯ ನಡುವೆ ತೋರಿಸಿಕೊಂಡಾಗ ಅಥವಾ ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಿದಾಗ ಚಿಕ್ಕ ಸಮಸ್ಯೆ ಕೂಡ ದೊಡ್ಡದಾಗುತ್ತೆ. ವಿಚಾರ ವಿಚ್ಛೇದನದ ಹಂತದವರೆಗೆ ತಲುಪುತ್ತೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗಲು ಕೂಡ ಈ ಮೂರನೇ ವ್ಯಕ್ತಿಯೇ ಕಾರಣ ಅನ್ನುವುದು ಅನೇಕರ ಅಭಿಪ್ರಾಯ. ಹೀಗಿರುವಾಗ ಚಂದನ್ ಶೆಟ್ಟಿ ಕೂಡ ತಮ್ಮ ಮದುವೆ ಮುರಿದು ಬೀಳಲು ಮೂರನೇ ವ್ಯಕ್ತಿ ಕಾರಣ ಅಂದಿದ್ದಾರೆ. ಆದರೆ..ಆ ಮೂರನೇ ವ್ಯಕ್ತಿಯ ವ್ಯಕ್ತಿತ್ವವನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.

ಹೌದು, ''ವಿಸ್ತಾರ ನ್ಯೂಸ್‌''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ, ನಾವಿಬ್ಬರೂ ದೂರವಾಗಲು ಆ ಮೂರನೇ ವ್ಯಕ್ತಿಯೇ ಕಾರಣ ಎಂದಿದ್ದಾರೆ. ಆದರೆ.. ಆ ಮೂರನೇ ವ್ಯಕ್ತಿ ಯಾರು ಎನ್ನುವುದು ನಮಗೂ ಗೊತ್ತಾಗಲ್ಲ ಅಂದಿದ್ದಾರೆ. ಹೌದು.. ಕುಟುಂಬ ಒಡೆಯಲು ಮೂರನೇ ವ್ಯಕ್ತಿಯೇ ಕಾರಣವಾಗುತ್ತಾರೆ. ಆದರೆ ಅವರು ಯಾರು ಎನ್ನುವುದು ಕೆಲವೊಮ್ಮೆ ನಮಗೂ ಗೊತ್ತಿರುವುದಿಲ್ಲ ಎಂದಿರುವ ಚಂದನ್ ಶೆಟ್ಟಿ, ಆ ಮೂರನೇ ವ್ಯಕ್ತಿ ನಮ್ಮೊಳಗೂ ಇರಬಹುದು ಎಂದಿದ್ದಾರೆ. ಇನ್ನೂ ಕೆಲವರು ಮುಖವಾಡ ಹಾಕಿಕೊಂಡು ಬದುಕುತ್ತಾರೆ, ಒಂದು ವಿಚಾರವನ್ನು ಕೆಲವರು ಮುಂದೆ ಒಂದು ರೀತಿ ಮಾತನಾಡುತ್ತಾರೆ. ಹಿಂದೆ ಒಂದು ರೀತಿ ಮಾತನಾಡುತ್ತಾರೆ. ಅಂತಹ ವ್ಯಕ್ತಿಗಳಿಗೆ ಎರಡು ವ್ಯಕ್ತಿತ್ವ ಇರುತ್ತವೆ ಎಂದಿದ್ದಾರೆ ಚಂದನ್ ಶೆಟ್ಟಿ.