Current Date 09 May, 2026

ಟಾಕ್ಸಿಕ್' ಅಲ್ಲ, ಈ ಕನ್ನಡ ಸಿನಿಮಾ 'ಪುಷ್ಪ'-2 ಹಿಂದಿ ದಾಖಲೆ ಮುರಿಯಲಿದೆ!

ಬಾಕ್ಸಾಫೀಸ್‌ನಲ್ಲಿ 'ಪುಷ್ಪ'-2 ದರ್ಬಾರ್ ಜೋರಾಗಿದೆ. ಮುಖ್ಯವಾಗಿ ಹಿಂದಿ ವರ್ಷನ್ ಕಲೆಕ್ಷನ್ ಹುಬ್ಬೇರಿಸುವಂತಿದೆ. ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಸಿನಿಮಾ ಮುನ್ನುಗ್ಗುತ್ತಿದೆ. ಸೌತ್ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಇತ್ತೀಚೆಗೆ ಸದ್ದು ಮಾಡ್ತಿವೆ. 'ಪುಷ್ಪ'-2 ದಾಖಲೆ ಕೂಡ ಬಹಳ ದಿನ ಉಳಿಯಲ್ಲ ಎನ್ನುವ ಚರ್ಚೆ ನಡೀತಿದೆ.

ಮಿಶ್ರ ಪ್ರತಿಕ್ರಿಯೆ ನಡುವೆಯೂ 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. 3 ವರ್ಷಗಳ ಹಿಂದೆ ಬಂದಿದ್ದ ' ಪುಷ್ಪ' ಸಿನಿಮಾ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ಬಗ್ಗೆ ನಿರೀಕ್ಷೆ ಇತ್ತು. ಅದಕ್ಕೆ ತಕ್ಕಂತೆ ಮೂಡಿ ಬಂದಿರುವ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಸಿನಿಮಾ ಗಳಿಕೆ ಕಮ್ಮಿ ಆಗಿದೆ.