Current Date 15 May, 2026

'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರೀ-ರಿಲೀಸ್; ಥಿಯೇಟರ್‌ಗಳು ಖಾಲಿ ಖಾಲಿ

ದರ್ಶನ್ ನಟನೆಯ ಹಿಟ್ ಸಿನಿಮಾಗಳು ಒಂದೊಂದಾಗಿ ರೀ-ರಿಲೀಸ್ ಆಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ ಮೇಲೆ ನಾಲ್ಕೈದು ಸಿನಿಮಾಗಳು ಮತ್ತೆ ತೆರೆಗೆ ಬಂದವು. ಆದರೆ ಎಲ್ಲದಕ್ಕೂ ಒಳ್ಳೆ ರೆಸ್ಪಾನ್ಸ್ ಸಿಗಲಿಲ್ಲ.

'ಶಾಸ್ತ್ರಿ', 'ಕರಿಯ' ಹಾಗೂ 'ನವಗ್ರಹ' ಚಿತ್ರಕ್ಕೆ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದರು. ಆದರೆ 'ಪೊರ್ಕಿ', 'ರಾಬರ್ಟ್' ಚಿತ್ರಗಳು ರೀ-ರಿಲೀಸ್‌ ಆಗಿ ನಿರಾಸೆ ಮೂಡಿಸಿದ್ದವು. ಇದೀಗ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಮರುಬಿಡುಗಡೆ ಆಗಿದೆ. ಆದರೆ ಸರಿಯಾದ ಪ್ರಚಾರ ಇಲ್ಲದೇ ಥಿಯೇಟರ್‌ಗಳು ಖಾಲಿ ಹೊಡೆಯುತ್ತಿವೆ. ಈ ಬಗ್ಗೆ ಸ್ವತಃ ದರ್ಶನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.