Current Date 26 Aug, 2026

ಶಿವಣ್ಣ,ಡಾಲಿಯ 'ಉತ್ತರಕಾಂಡ' ಶೂಟಿಂಗ್ ನಿಂತಿದ್ದೇಗೆ? ಕಾರ್ತಿಕ್ ಗೌಡ ಕೊಟ್ಟ ಕಾರಣವೇನು?

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಉತ್ತರಕಾಂಡ' ಕೂಡ ಒಂದಾಗಿತ್ತು. ಕೆಆರ್‌ಜಿ ಸ್ಟುಡಿಯೋ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಸದ್ಯದ ಶೂಟಿಂಗ್ ಕೂಡ ಆರಂಭ ಆಗಿತ್ತು. ಉತ್ತರ ಕರ್ನಾಟಕದ ರಗಡ್ ಸ್ಟೋರಿಗಳನ್ನು ತೆರೆಮೇಲೆ ತರುವುದಕ್ಕೆ ನಿರ್ದೇಶಕ ರೋಹಿತ್ ಪದಕಿ ಉತ್ಸಾಹದಿಂದಲೇ ಕೆಲಸ ಆರಂಭಿಸಿದ್ದರು.

ಬಹುತಾರಾಗಣದ ಸಿನಿಮಾ ಆಗಿದ್ದರಿಂದ 'ಉತ್ತರಕಾಂಡ' ಶೂಟಿಂಗ್ ತಡವಾಗಬಹುದೆಂಬ ನಿರೀಕ್ಷೆ ಇದ್ದೇ ಇತ್ತು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಡಾಲಿ ಧನಂಜಯ್, ದಿಗಂತ್ ಸೇರಿದಂತೆ ಹಲವು ಮಂದಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಬಹುತಾರಾಗಣದ ಸಿನಿಮಾವನ್ನು ಕಣ್ತುಂಬಿ ಕೊಳ್ಳುವುದಕ್ಕೆ ಪ್ರೇಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದರು.